ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಉದ್ಯಮಿಗಳು ಮುಂದಾಗಲಿ

ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಉದ್ಯಮಿಗಳು ಮುಂದಾಗಲಿ

ಮಲೇಬೆನ್ನೂರಿನಲ್ಲಿ ಬಿಇಓ ಹನುಮಂತಪ್ಪ ಮನವಿ

ಮಲೇಬೆನ್ನೂರು, ಜ.20- ಬೆಂಗಳೂರಿನಲ್ಲಿ ಸರ್ಕಾರಿ ಶಾಲೆಗಳನ್ನು ಬಹು ರಾಷ್ಟ್ರೀಯ ಕಂಪನಿಗಳು ಮತ್ತು ಉದ್ಯಮಿಗಳು ಅಭಿವೃದ್ಧಿಪಡಿಸಿದಂತೆ ಹರಿಹರ ತಾಲ್ಲೂಕಿನಲ್ಲೂ ವರ್ತಕರು, ಉದ್ಯಮಿಗಳು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ ಮನವಿ ಮಾಡಿದರು.

ಅವರು ಗುರುವಾರ ಪಟ್ಟಣದ ಪಿಡಬ್ಲ್ಯೂಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬೆಂಗಳೂರಿನ ಕೃತಗ್ಯತಾ ಟ್ರಸ್ಟ್ ನೀಡಿದ ಧ್ವನಿವರ್ಧಕ ಮತ್ತು ಮಾರುತಿ ಮೆಡಿಕಲ್ಸ್ ನೀಡಿದ ನೋಟ್ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿ ಮಾತನಾಡಿದರು. 

ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿಗಳೂ ನಡೆಯುತ್ತಿದ್ದು, ಕ್ಷೀರ ಭಾಗ್ಯ, ಬಾಳೇಹಣ್ಣು, ಶೇಂಗಾಚಿಕ್ಕಿ, ಸಮವಸ್ತ್ರ, ವಿದ್ಯಾರ್ಥಿ ವೇತನಗಳನ್ನು ನೀಡುತ್ತಿದ್ದರೂ ಸಹ ಹಾಜರಾತಿ ಕ್ಷೀಣಿಸುತ್ತಿರುವುದು ಪೋಷಕರ ಇಂಗ್ಲಿಷ್ ವ್ಯಾಮೋಹದಿಂದ ಎಂದು ವಿಷಾದಿಸಿದರು.

ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಹೆಗಡೆ, ವಿವಿಧ ಶಾಲೆಗಳ ಶಿಕ್ಷಕರಾದ ರಾಘವೇಂದ್ರ, ಪೀರುನಾಯ್ಕ್, ಆನಂದ್, ಮಲ್ಲಿಕಾರ್ಜುನ್, ಪಿಡಬ್ಲ್ಯೂಡಿ ಶಾಲೆಯ ಮುಖ್ಯ ಶಿಕ್ಷಕ ಕುಮಾರ್, ಎಸ್‍ಡಿಎಂಸಿ ಅಧ್ಯಕ್ಷ ಬೆಣ್ಣೆಹಳ್ಳಿ ಬಸವರಾಜ್, ಎಸ್‍ಡಿಎಂಸಿ ಸದಸ್ಯರುಗಳು ಹಾಜರಿದ್ದರು. ನೇತ್ರಾವತಿ ನಿರೂಪಿಸಿದರು. ಶಿಕ್ಷಕ ಶಿವಕುಮಾರ್ ವಂದಿಸಿದರು.

error: Content is protected !!