ತೋಳಹುಣಸೆ ಶಾಲೆಯಲ್ಲಿ `ಸ್ಪಿಕ್ ಮ್ಯಾಕೆ’ ಕೂಡಿಯಾಟಂ ಅಭಿನಯ ಪ್ರದರ್ಶನ

ತೋಳಹುಣಸೆ ಶಾಲೆಯಲ್ಲಿ `ಸ್ಪಿಕ್ ಮ್ಯಾಕೆ’   ಕೂಡಿಯಾಟಂ ಅಭಿನಯ ಪ್ರದರ್ಶನ

ದಾವಣಗೆರೆ, ಫೆ.20- ನಗರದ ಹೊರ ವಲಯದಲ್ಲಿರುವ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಆಂಗ್ಲ ಮಾಧ್ಯಮ ವಸತಿ ಶಾಲೆಯಲ್ಲಿ `ಸ್ಪಿಕ್ ಮ್ಯಾಕೆ’ ಪ್ರಾಯೋಜಕತ್ವದಲ್ಲಿ ಕೂಡಿಯಾಟಂ ಅಭಿನಯ ಪ್ರದರ್ಶನ ಆಯೋಜಿಸಲಾಗಿತ್ತು. 

ಈ ಅಭಿನಯ ಪ್ರಕಾರವು ಸಂಸ್ಕೃತದಲ್ಲಿ ರೂಪಿತವಾಗಿದ್ದು, ಹೆಚ್ಚಾಗಿ ಕೇರಳ ರಾಜ್ಯದಲ್ಲಿ ಪ್ರಚಲಿತದಲ್ಲಿದೆ ಮತ್ತು ದೇವಸ್ಥಾನಗಳಲ್ಲಿ ಹೆಚ್ಚಾಗಿ ಪ್ರದರ್ಶಿಸಲ್ಪಡುತ್ತದೆ. ಇದಕ್ಕೆ ಸುಮಾರು 2000 ವರ್ಷಗಳ ಇತಿಹಾಸವಿದ್ದು, ಇದು ವಿಶ್ವಸಂಸ್ಥೆಯ ಸಾಂಸ್ಕೃತಿಕ ಅಂಗ ಯುನೆಸ್ಕೋದಿಂದ ಮಾನವೀಯತೆ ಪರಂಪರೆಯ ಸಾಕಾರ ಎಂಬ ಪ್ರಶಂಸೆಯನ್ನು ಪಡೆದಿದೆ ಎಂದು ಅಧ್ಯಕ್ಷತೆ ವಹಿಸಿದ್ದ ದಾವಣಗೆರೆ ವಿಭಾಗದ ಸ್ಪಿಕ್ ಮ್ಯಾಕೆ ಮುಖ್ಯಸ್ಥರು ಮತ್ತು ಶಾಲೆಯ ಮುಖ್ಯಸ್ಥರಾದ ಮಂಜುನಾಥ ರಂಗರಾಜು ಅವರು ತಿಳಿಸಿದರು.

ಶಾಲೆಯ ಶ್ರೀ ಗಣೇಶ್ ಸಭಾಂಗಣದಲ್ಲಿ   ಪ್ರಸಿದ್ಧ ಕಲಾವಿದರಾದ ಮಾರಿ ಮಧು,   ಶ್ರೀಮತಿ ಇಂದು ಜಿ. ನಾಯರ್,   ಮಣಿಕಂಠನ್,  ಜಿನೇಶ್ ಚಾಕ್ಸಿಯಾರ್,   ರಾಜನ್, ಶ್ರೀಜಿತ್  ಮುಂತಾದವರು ಕಲಾಕೌಶಲ್ಯವನ್ನು ಪ್ರದರ್ಶಿಸಿ ಪ್ರೇಕ್ಷಕರನ್ನು ಮುದಗೊಳಿಸಿದರು.

ಪ್ರಾಚಾರ್ಯರಾದ ಅರುಣ್ ಪ್ರಸಾದ್ ಮತ್ತು   ರಾಜೇಶ್ ಪ್ರಸಾದ್, ಉಪ ಪ್ರಾಂಶುಪಾಲ  ಉಮಾಪತಿ ಎಚ್.ಜಿ ಮತ್ತಿತರರು ಉಪಸ್ಥಿತರಿದ್ದರು.   ಶಿಕ್ಷಕಿ ಶ್ರೀಮತಿ ಎಂ. ಲಕ್ಷ್ಮಿ ಕಾರ್ಯಕ್ರಮದ ಉದ್ದೇಶವನ್ನು ತಿಳಿಸಿದರು.

error: Content is protected !!