ಶ್ರೇಷ್ಠ ಸಂಸ್ಕೃತಿ ಹೊಂದಿರುವ ಹಿಂದೂ ಧರ್ಮ

ಶ್ರೇಷ್ಠ ಸಂಸ್ಕೃತಿ ಹೊಂದಿರುವ ಹಿಂದೂ ಧರ್ಮ

ಹರಪನಹಳ್ಳಿಯಲ್ಲಿ ರಾಮಘಟ್ಟದ ಶ್ರೀ ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿ

ಹರಪನಹಳ್ಳಿ, ಫೆ.20- ಹಿಂದೂ ಧರ್ಮ ಶ್ರೇಷ್ಠ ಸಂಸ್ಕೃತಿ ಹೊಂದಿದೆ. ಈ ಧರ್ಮ ಸಭ್ಯತೆ ಮತ್ತು ಸಂಸ್ಕಾರ ಎರಡನ್ನೂ ಜಗತ್ತಿಗೆ ನೀಡಿದೆ ಎಂದು ರಾಮಘಟ್ಟದ ಶ್ರೀ ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಚಿರಸ್ತಹಳ್ಳಿಯಲ್ಲಿ  ಶ್ರೀ ಕೊಲ್ಲಮ್ಮ ದೇವಿ ನೂತನ ಶಿಲಾಮೂರ್ತಿ ಪ್ರತಿಷ್ಠಾಪನೆ ನೆರವೇರಿಸಿ ಶ್ರೀಗಳು ಮಾತನಾಡಿದರು. ದೇವಾಲಯಗಳು ಶಾಂತಿ, ಸಾಮರಸ್ಯ ಬೆಳೆಸುವ ಪವಿತ್ರ ಕೇಂದ್ರಗಳಾಗಿವೆ. ದೇವರಿಗೆ ಅನೇಕ ಹೆಸರುಗಳಿದ್ದರೂ ಶಕ್ತಿ ಮೂಲ ಒಂದೇಯಾಗಿದೆ

ಗ್ರಾಮದ ಪ್ರತಿ ವಿದ್ಯಾರ್ಥಿಯೂ ಶಿಕ್ಷಣ ಪಡೆದು ವಿದ್ಯಾವಂತರಾಗಬೇಕು. ಪರಸ್ಪರ ಗೌರವಿಸುವ ಭಾವನೆ ಬೆಳೆಸಿಕೊಳ್ಳಬೇಕು ಎಂದರು.

ಮಲ್ಲಿಕಾರ್ಜುನ ಸ್ವಾಮಿ ಕಲ್ಮಠ ಮಾತನಾಡಿ, ಭಾರತದಲ್ಲಿ ಹಲವಾರು ಧರ್ಮಗಳು ಮತ್ತು ಆಚರಣೆಗಳು ಬೆಳೆದು ಬಂದಿವೆ. ಸತ್ಯ, ಸಂಸ್ಕೃತಿ ಮತ್ತು ಆದರ್ಶಗಳನ್ನು ಎತ್ತಿ ಹಿಡಿಯಲು ಈ ನಾಡಿನ ಮಠ ಮಂದಿರಗಳು ಕಾರ್ಯ ಮಾಡುತ್ತಾ ಬಂದಿವೆ. ದೇವಾಲಯಗಳ ಮೇಲಿರುವ ನಂಬಿಗೆ ದೇವರಲ್ಲಿಟ್ಟಿರುವ ಶ್ರದ್ಧೆ ಅಪಾರ. ಆಧುನಿಕತೆಯ ಹೆಸರಿನಲ್ಲಿ ಜನರ ಭಾವನೆಗಳನ್ನು ಕಲುಷಿತಗೊಳಿಸಬಾರದು ಎಂದು ಹೇಳಿದರು.

ಸಮಾರಂಭದಲ್ಲಿ ಗ್ರಾ.ಪಂ.ಸದಸ್ಯ ಚನ್ನಮಲ್ಲಿಕಾರ್ಜುನ ಸ್ವಾಮಿ, ವಿ.ಎಸ್.ಎಸ್.ಎನ್ ನಿರ್ದೇಶಕ ಹೆಚ್.ಪರಮೇಶ್ವರಪ್ಪ, ಟಿ.ಪ್ರಭಾಕರ್, ಮುಖಂಡರಾದ  ಬಿ.ಹೆಚ್.ಬಸವರಾಜಪ್ಪ, ಭೋವಿ ರಾಜಪ್ಪ, ದುರುಗಪ್ಪ ಸುಮಲತಾ,  ರೇಣುಕ ಪ್ರಸಾದ ಕಲ್ಮಠ ಗ್ರಾಮಸ್ಥರು ಭಾಗವಹಿಸಿದ್ದರು.

error: Content is protected !!