ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಿ.ವಿ. ಪಾಟೀಲ್

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಿ.ವಿ. ಪಾಟೀಲ್

ಹರಿಹರದಲ್ಲಿ ಮಾರ್ಚ್ 18 ರಂದು ಸಮ್ಮೇಳನ

ಹರಿಹರ, ಫೆ.20-  ನಗರದ ಸಿದ್ದೇಶ್ವರ ಪ್ಯಾಲೇಸ್ ಸಭಾಂಗಣದಲ್ಲಿ ಮಾರ್ಚ್ 18 ಮತ್ತು 19 ರಂದು 13 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅದ್ದೂರಿ ಮತ್ತು ಅರ್ಥಪೂರ್ಣ ಆಚರಣೆಗೆ ತೀರ್ಮಾನ ಕೈಗೊಂಡಿದ್ದು, ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಪ್ರೊ. ಸಿ.ವಿ. ಪಾಟೀಲ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಬಿ. ವಾಮದೇವಪ್ಪ ತಿಳಿಸಿದರು.

ನಗರದ ಎಸ್.ಜೆ.ವಿ.ಪಿ. ಕಾಲೇಜು ಸಭಾಂಗಣದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಇಂದು ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಜಿಲ್ಲಾ ಉಸ್ತುವಾರಿ ಸಚಿವರು,  ಸಂಸದರು, ಶಾಸಕರು, ಮಾಜಿ ಶಾಸಕರು  ಸೇರಿದಂತೆ, ವಿವಿಧ ಪಕ್ಷಗಳ ರಾಜಕೀಯ ಮುಖಂಡರು, ನಾಡಿನ ಹಲವಾರು ಸಾಹಿತಿಗಳು, ವಿದ್ವಾಂಸರು, ಕನ್ನಡ ಪರ ಸಂಘಟನೆಯವರು, ರೈತರು, ಸರ್ಕಾರಿ ನೌಕರರು ಎಲ್ಲರನ್ನೂ ಒಳಗೊಂಡಂತೆ ರಾಜ್ಯಕ್ಕೆ ಮಾದರಿಯಾಗುವ ನಿಟ್ಟಿನಲ್ಲಿ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಲಾಗುವುದು. 

ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ, ಪ್ರೊ ಸಿ.ವಿ. ಪಾಟೀಲ್, ಕಲೀಂ ಭಾಷಾ, ಎ.ಬಿ. ರಾಮಚಂದ್ರಪ್ಪ ಅವರ ಹೆಸರುಗಳು ಮುನ್ನೆಲೆಗೆ ಬಂದು ಅದರಲ್ಲಿ ನಿವೃತ್ತ ಪ್ರಾಧ್ಯಾಪಕ ಪ್ರೊ. ಸಿ.ವಿ‌ ಪಾಟೀಲ್ ಹೆಸರು ಹೆಚ್ಚು ಮುನ್ನೆಲೆಯಲ್ಲಿ ಬಂದಿದ್ದರಿಂದ ಅವರನ್ನು ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು ಎಂದು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಾಧ್ಯಕ್ಷ ರಾಘವೇಂದ್ರ ನಾಯರಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ  ಮಾಜಿ ಅಧ್ಯಕ್ಷ ಎಸ್.ಹೆಚ್. ಹೂಗಾರ್, ಕಾರ್ಮಿಕ ಮುಖಂಡ ಹೆಚ್.ಕೆ. ಕೊಟ್ರಪ್ಪ, ಹಿಂದುಳಿದ ವರ್ಗಗಳ ಸಮಾನ ಮನಸ್ಕರ ವೇದಿಕೆಯ ಅಧ್ಯಕ್ಷ ಮರಿಯೋಜಿರಾವ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಎಂ. ಮಂಜುನಾಥಯ್ಯ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ.ಕೆ. ಭೂಮೇಶ್ ಇತರರು ಮಾತನಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಬಿ ದಿಳ್ಳೆಪ್ಪ  ರೇವಣಸಿದ್ದಪ್ಪ ಅಂಗಡಿ, ಸಂಘಟನಾ ಕಾರ್ಯದರ್ಶಿ ಜಿಗಳಿ ಪ್ರಕಾಶ್, ಜಿಲ್ಲಾ ಸದಸ್ಯರಾದ ಎ. ರಿಯಾಜ್ ಆಹ್ಮದ್, ಸತ್ಯಭಾಮ ಮಂಜುನಾಥ್, ತಾಲ್ಲೂಕು ಗೌರವ ಕಾರ್ಯದರ್ಶಿ ಎಂ. ಚಿದಾನಂದ ಕಂಚಿಕೇರಿ, ಗೌರವ ಕಾರ್ಯದರ್ಶಿ ಬಿ.ಬಿ. ರೇವಣ್ಣನಾಯ್ಕ್, ಕಸಾಪ ಹೋಬಳಿ ಘಟಕದ ದಂಡಿ ತಿಪ್ಪೇಸ್ವಾಮಿ, ಸದಾನಂದ, ಮಹಿಳಾ ಘಟಕದ ಅಧ್ಯಕ್ಷೆ ಕೆ.ಟಿ. ಗೀತಾ, ಕಸಾಪ ಸದಸ್ಯರಾದ ಸುರೇಶ್ ಕುಣೆಬೆಳಕೆರೆ, ಎಂ. ಉಮ್ಮಣ್ಣ, ನಾಗರಾಜ್, ದೂಡಾ ಮಾಜಿ ಸದಸ್ಯ ಹೆಚ್.ನಿಜಗುಣ, ಕಾಂಗ್ರೆಸ್ ಪಕ್ಷದ ಮುಖಂಡರಾದ ಸಿ.ಎನ್. ಹುಲುಗೇಶ್, ಕೆ.ಬಿ. ರಾಜಶೇಖರ, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಈಶಪ್ಪ ಬೂದಿಹಾಳ, ಸಾಹಿತ್ಯ ಸಂಗಮ ಅಧ್ಯಕ್ಷ ವಿ.ಬಿ. ಕೊಟ್ರೇಶ್, ಕಾರ್ಯದರ್ಶಿ ಎನ್.ಇ. ಸುರೇಶ್ ಚಿಂತನ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ನಾಡಿಗೇರ, ಫ್ರಾನ್ಸಿಸ್,  ಪತ್ರಕರ್ತರಾದ  ಶೇಖರಗೌಡ, ಅಣ್ಣಪ್ಪ ಲಕ್ಕಶೆಟ್ಟಿಹಳ್ಳಿ, ಸಂತೋಷ ಗುಡಿಮನಿ, ಶೇಕ್,  ಎಬಿವಿಪಿ ವೀರೇಶ್ ಅಜ್ಜಣ್ಣನವರ್, ಕನ್ನಡ ಪರ ಸಂಘಟನೆ ಮುಖಂಡರಾದ ಕವಿತಾ ಪೇಟೆಮಠ್, ನಾಗರಾಜ್ ಭಂಡಾರಿ, ಹೆಚ್.ಸುಧಾಕರ, ಇಲಿಯಾಸ್ ಆಹ್ಮದ್, ಪ್ರೀತಂ ಬಾಬು, ಶಶಿನಾಯ್ಕ್, ಭಾಗ್ಯಮ್ಮ, ನಾಗಮ್ಮ ಐರಣಿಯಮ್ಮ, ರಾಹುಲ್ ಮೆಹರ್ವಾಡೆ, ಶ್ವೇತಾ, ಮೇಘ, ವಾಸು ಕುಂಬಳೂರು ಇತರರು ಹಾಜರಿದ್ದರು.  

error: Content is protected !!