ದಾವಣಗೆರೆ, ಫೆ. 20- ಮಹಾನಗರ ಪಾಲಿಕೆ ವತಿಯಿಂದ ವಾರ್ಡ್ ನಂಬರ್ 16ರ ವಿನೋಬನಗರದಲ್ಲಿ ಏರ್ಪಡಿಸಲಾಗಿದ್ದ ಮನೆ ಬಾಗಿಲಿಗೆ ಇ- ಸ್ವತ್ತು ಕಾರ್ಯಕ್ರಮವನ್ನು ಮಹಾನಗರ ಪಾಲಿಕೆ ಸದಸ್ಯರಾದ ಎ. ನಾಗರಾಜ್ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತರಾದ ರೇಣುಕಾ, ಉಪಆಯುಕ್ತರಾದ ಲಕ್ಷ್ಮಿ ಹಾಗೂ ವಲಯ ಆಯುಕ್ತರಾದ ನಾಗರಾಜ್, ಕಂದಾಯ ಅಧಿಕಾರಿಯಾದ ಈರಮ್ಮ, ಬಿಲ್ಕಲೆಕ್ಟರ್ ನಾಗರಾಜ್, ವಾರ್ಡ್ ಅಧ್ಯಕ್ಷ ಸುರೇಶ್, ಮುಖಂಡರಾದ ರವಿ, ಸತೀಶ್, ರಾಮಚಂದ್ರ ರಾಯ್ಕರ್, ಯೋಗೇಶ್, ಸೋಮಶೇಖರ್, ಚೌಡಪ್ಪ, ಶೇಖರ್, ಗೋಪಾಲ್ ಮುಂತಾದವರಿದ್ದರು.
January 11, 2025