ಹರಿಹರ, ಫೆ.18- ಇಲ್ಲಿನ ಮರಿಯಾ ನಿವಾಸ ಶಾಲೆಯಲ್ಲಿ ರಾಷ್ಟ್ರೀಯ ವಿಪತ್ತು ಸ್ಪಂದನ ಪಡೆಯ ರಕ್ಷಣಾ ಸಿಬ್ಬಂದಿಗಳು ತುರ್ತು ವಿಪತ್ತು ಸಂದರ್ಭದಲ್ಲಿ ಕೈಗೊಳ್ಳಬೇ ಕಾದ ಮುಂಜಾಗ್ರತಾ ಕಾರ್ಯಗಳ ಕುರಿತು ಅಣಕು ಪ್ರದರ್ಶನವನ್ನು ನೀಡಿದರು.
ಜಿಲ್ಲಾ ಆಡಳಿತ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ವತಿಯಿಂದ ಕಾರ್ಯಕ್ರಮ ಆಯೋಜಿಸ ಲಾಗಿತ್ತು. ಈ ಸಂದರ್ಭದಲ್ಲಿ ಟೀಮ್ ಕಮಾಂಡರ್ ಐಎನ್ಎಸ್‌ಪಿ ಅಜಯ್ ಕುಮಾರ್ ಮತ್ತು ಕಮಾಂಡರ್ ಎಎಸ್‌ಐ ಸೋಂಭೀರ್ ಕುಮಾರ್, ಕ್ಷೇತ್ರ ಶಿಕ್ಷಣಾಧಿ ಕಾರಿ ಹನುಮಂತಪ್ಪ, ಮೇಜರ್ ಶ್ರೀಕಾಂತ್, ಸಿಪಾಯಿ ದೇವರಾಜ್, ಅರ್ಜುನ್ ಎಸ್.ಕೆ., ಪ್ರದೀಪ್ ಕುಮಾರ್, ಅಲ್ಬಿನ್, ವಿಜಯ್, ಯು, ನವೀನ್‌ಕೃಷ್ಣ ದಾಸ್ ಹಾಗೂ ಸತೀಶ್ ಮತ್ತು ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷರಾದ ಫಾದರ್ ಜಾರ್ಜ್ ಮತ್ತು ಕೆ.ಬಿ. ರಾಜಶೇಖರ್ ಕಾಳಿದಾಸ ಶಾಲೆಯ ಕಾರ್ಯದರ್ಶಿ ಪ್ರೀತಿ, ಸಿಆರ್‌ಪಿ ಶ್ರೀಮತಿ ರೂಪ, ಹಾಗೂ ಬಿಆರ್‌ಪಿ ಮಂಜುನಾಥ ಆಡಿನ, ಸಿಆರ್‌ಪಿ ಬಸವರಾಜಯ್ಯ, ಬಿಆರ್‌ಪಿ ವೀರಪ್ಪ, ಶ್ರೀಮತಿ ರತ್ನ, ಲಕ್ಷ್ಮಣ್ ಮತ್ತಿತರರು ಉಪಸ್ಥಿತರಿದ್ದರು.
ಸ್ಕೌಟ್ ಮಾಸ್ಟರ್ ಪರಮೇಶ್ವರಪ್ಪ ಮತ್ತು ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಪ್ರಭಾಕರ್, ಶ್ರೀಮತಿ ಅಶ್ವಿನಿ ಕಾರ್ಯಕ್ರಮವನ್ನು ಸಂಘಟಿಸಿದ್ದರು.