ಎಸ್‌.ಜೆ.ಎಂ. ಪಬ್ಲಿಕ್ ಶಾಲೆಯಲ್ಲಿ 19ನೇ ವರ್ಷದ ವಾರ್ಷಿಕೋತ್ಸವ

ಎಸ್‌.ಜೆ.ಎಂ. ಪಬ್ಲಿಕ್ ಶಾಲೆಯಲ್ಲಿ 19ನೇ ವರ್ಷದ ವಾರ್ಷಿಕೋತ್ಸವ

ದಾವಣಗೆರೆ, ಫೆ. 18- ಇಲ್ಲಿನ ನಿಟುವಳ್ಳಿಯ ಎಸ್‌.ಜೆ.ಎಂ. ಪಬ್ಲಿಕ್ ಶಾಲೆಯ 19ನೇ ವರ್ಷದ ವಾರ್ಷಿಕೋತ್ಸವ `ಜ್ಞಾನ ಕಾರಂಜಿ – 2024′ ಕಾರ್ಯಕ್ರಮವು ಶ್ರೀ ಶಿವಯೋಗ ಮಂದಿರದಲ್ಲಿ ಕಳೆದ ವಾರ ನಡೆಯಿತು.

ಶ್ರೀ ಬಸವ ಪ್ರಭು ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಶ್ರೀನಿವಾಸ್ ಕಾರ್ಯಕ್ರಮ ಉದ್ಘಾಟಿಸಿದರು. 

ಸಂಸ್ಥೆಯ ಕಾರ್ಯದರ್ಶಿ ಡಿ. ಮಹೇಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು. ಮಹಾಂತೇಶ್ ವಿ. ಒಣರೊಟ್ಟಿ ಬಹುಮಾನ ವಿತರಣೆ ಮಾಡಿದರು. ಮುಖ್ಯ ಅತಿಥಿಗಳಾಗಿ ಸಿ.ಆರ್‌.ಪಿ. ಭರತ್, ಇ.ಎಂ. ಮಂಜುನಾಥ ಹಾಗೂ ರಾಜು ದೊಡ್ಮನಿ ಉಪಸ್ಥಿತರಿದ್ದರು.

ಶ್ರೀಮತಿ ಉಮಾವತಿ ಪ್ರಾರ್ಥಿಸಿದರು. ಶಾಂತಕುಮಾರ್ ನಿರೂಪಿಸಿದರು. ಕೆ.ಎಸ್. ಕೊಟ್ರೇಶ್ ಸ್ವಾಗತಿಸಿದರು. ಹಿರಿಯ ಶಿಕ್ಷಕಿ ಶ್ರೀಮತಿ ಕಮಲ, ಸಂಸ್ಥೆಯ ಅಧ್ಯಕ್ಷರಾದ ಪುಷ್ಪಾ ಮಹೇಶ್ವರಪ್ಪ, ಮಲ್ಲಿಕಾರ್ಜುನ ದೊಡ್ಮನಿ ಉಪಸ್ಥಿತರಿದ್ದರು.

error: Content is protected !!