ಹರಿಹರ, ಫೆ.15- ನಗರದ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ಗೌರವ ಅಧ್ಯಕ್ಷರಾಗಿ ಜಿ.ವಿ. ಪ್ರವೀಣ್, ಅಧ್ಯಕ್ಷರಾಗಿ ರಾಹುಲ್ ಮೆಹರ್ವಾಡೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ವಿಶ್ವ ರಕ್ಷಣಾ ವೇದಿಕೆಯ ರಾಜ್ಯ ಉಪಾಧ್ಯಕ್ಷ ನಾಗರಾಜ್ ಭಂಡಾರಿ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಪ್ರಧಾನ ಕಾರ್ಯದರ್ಶಿಯಾಗಿ ಗಣೇಶ, ಯುವ ಘಟಕದ ಅಧ್ಯಕ್ಷರಾಗಿ ಸಮೀರ್ ಸೇರಿದಂತೆ ಲಿಂಗರಾಜ್, ಚಂದ್ರಶೇಖರ್, ರವಿಂದ್ರ ಸಿಂಗ್ ಮತ್ತಿತರರನ್ನು ಪದಾಧಿಕಾರಿಗಳಾಗಿ ನೇಮಕ ಮಾಡಲಾಗಿದೆ.
ಈ ಸಂದರ್ಭದಲ್ಲಿ ವೇದಿಕೆಯ ಜಿಲ್ಲಾ ಅಧ್ಯಕ್ಷ ಬಾಬು ರಾಮ್ ಸುತ್ರಾವೆ, ಜಿ.ವಿ. ಪ್ರವೀಣ್, ರಾಹುಲ್ ಮೆಹರ್ವಾಡೆ, ಲಿಂಗರಾಜ್, ಗಣೇಶ, ಸಮೀರ್, ಚಂದ್ರಶೇಖರ್, ರವಿಂದ್ರಸಿಂಗ್, ಪ್ರವೀಣ್, ಪವರ್ ಇತರರು ಹಾಜರಿದ್ದರು.