ಸಾಸ್ವೆಹಳ್ಳಿ, ಫೆ. 13- ಹೊನ್ನಾಳಿ ತಾಲ್ಲೂಕು ಸಾಸ್ವೆಹಳ್ಳಿ ಸಮೀಪದ ಕಮ್ಮಾರಗಟ್ಟೆಯ ಹಾಲು ಉತ್ಪಾದಕರ ಸಂಘಕ್ಕೆ ಮೂರನೇ ಬಾರಿ ಅಧ್ಯಕ್ಷರಾಗಿ ಕೆ.ಪಿ. ರುದ್ರೇಶ್, ಉಪಾಧ್ಯಕ್ಷರಾಗಿ ಡಿ.ಪಾರ್ವತಮ್ಮ ಆಯ್ಕೆಯಾಗಿದ್ದಾರೆ.
ನಿರ್ದೇಶಕರಾಗಿ ಹೆಚ್.ಕೆ. ವೆಂಕಟೇಶ್ ಶೆಟ್ಟಿ, ಬಿ.ಮಂಜಪ್ಪ, ಕೆ.ಎಂ. ತಿಪ್ಪೇಸ್ವಾಮಿ, ಕಲ್ಲಪ್ಪ, ಎಂ.ಹೆಚ್.ಮಹೇಶ್ವರಪ್ಪ, ರುದ್ರನಾಯ್ಕ, ಟಿ.ಹನುಮಂತಪ್ಪ, ಎ. ಶಾರದಮ್ಮ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ನವೀನ್ ಕುಮಾರ್ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕಾರ್ಯದರ್ಶಿ ಬಿ.ಹೆಚ್. ನಟರಾಜ್ ಮತ್ತಿತರರು ಉಪಸ್ಥಿತರಿದ್ದರು.