ಭಾರತೀಯ ಸಂಜ್ಞೆ ಭಾಷೆ ಕಲಿತರೆ ಎಲ್ಲರಿಗೂ ಅನುಕೂಲ

ಭಾರತೀಯ ಸಂಜ್ಞೆ ಭಾಷೆ ಕಲಿತರೆ ಎಲ್ಲರಿಗೂ ಅನುಕೂಲ

ದಾವಣಗೆರೆ, ಫೆ. 12-  ಭಾರತೀಯ ಸಂಜ್ಞೆ ಭಾಷೆಯನ್ನು ಕೇವಲ ಶ್ರವಣ ದೋಷವಿರುವವರಷ್ಟೇ ಅಲ್ಲದೇ ಎಲ್ಲರೂ ಕಲಿತರೆ ಸಂವಹನ ನಡೆಸಲು ಅನುಕೂಲವಾಗುತ್ತದೆ ಎಂದು ಸಿ.ಆರ್.ಸಿ. ಕೇಂದ್ರದ ನಿರ್ದೇಶಕರಾದ ಮೀನಾಕ್ಷಿ ಹೇಳಿದರು.

ನಗರದ ದೇವರಾಜ ಅರಸು ಬಡಾವಣೆಯಲ್ಲಿ ಸಿಆರ್‌ಸಿ ಕೇಂದ್ರದ ವಿಕಲಚೇತನರ ಕೌಶಲ್ಯ ಭವನದಲ್ಲಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಜಿಲ್ಲಾ ಕಿವುಡರ ಸಂಘದ ಸಂಯುಕ್ತಾಶ್ರಯದಲ್ಲಿ ಮಹಾನಗರ ಪಾಲಿಕೆ ಮತ್ತು ವಿವಿಧ ಇಲಾಖೆ ಅಧಿಕಾರಿಗಳಿಗೆ, ವಿವಿಧ ಸಂಘ-ಸಂಸ್ಥೆಗಳ ಸದಸ್ಯರು, ಪೋಷಕರಿಗೆ ಹಮ್ಮಿಕೊಂಡಿದ್ದ `ಭಾರತೀಯ ಸಂಜ್ಞೆ ಭಾಷೆ ತರಬೇತಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪೋಷಕರು ಮೊದಲು ಸಂಜ್ಞೆಭಾಷೆ ಕಲಿಯಬೇಕು. ಆಗ ಮಕ್ಕಳ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿದೆ. ಭಾರತದಲ್ಲಿ ಹಲವು ಭಾಷೆಗಳಿದ್ದರೂ ಸಂಜ್ಞೆ ಭಾಷೆ ಒಂದೇ ಆಗಿದೆ. ನಾನಾ ಭಾಷಿಕ ಪ್ರದೇಶದವರು ಒಂದೇ ಸಂಜ್ಞೆ ಬಳಸುತ್ತಿರುವುದರಿಂದ ವಿದೇಶಿಗರಿಗೂ ಸುಲಭವಾಗಿ ಅರ್ಥವಾಗುತ್ತದೆ ಎಂದರು. ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಅಧಿಕಾರಿ ಕೆ.ಕೆ. ಪ್ರಕಾಶ್, ಜಿಲ್ಲಾ ಕಿವುಡರ ಸಂಘದ ಅಧ್ಯಕ್ಷ ಎ. ಆಸೀಫ್, ಶಿಕ್ಷಣ ಇಲಾಖೆಯ ಯೋಗೇಶ್ವರ್, ಆರೋಗ್ಯ ಇಲಾಖೆ ಡಾ. ರೂಪ ಮತ್ತಿತರರು ಭಾಗವಹಿಸಿದ್ದರು. 

error: Content is protected !!