ಬಂಜಾರ ಸಮಾಜದ ಪರಂಪರೆ, ಸಂಸ್ಕೃತಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ

ಬಂಜಾರ ಸಮಾಜದ ಪರಂಪರೆ, ಸಂಸ್ಕೃತಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ

ಮಾಡ್ಲಗೇರಿ ತಾಂಡಾದಲ್ಲಿ 22ನೇ ವರ್ಷದ ಮಾಲಾಧಾರಿಗಳ ಪಾದಯಾತ್ರೆ ಕಾರ್ಯಕ್ರಮದಲ್ಲಿ ಮುಖಂಡರ ಸ್ಮರಣೆ

ಹರಪನಹಳ್ಳಿ,ಫೆ.12-   ಗೋರ್ ಬಂಜಾರ ಸಮಾಜದ ಪರಂಪರೆ, ಸಂಸ್ಕೃತಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕೆಲವು ಲೇಖನ ಮತ್ತು ಪ್ರವಾಸಿಗರ ಬರಹಗಳಲ್ಲಿ  ಬಂಜಾರರ ಕುರಿತು  ಉಲ್ಲೇಖಿಸಲಾಗಿದೆ. ಬಂಜಾರರ  ಸಂಸ್ಕೃತಿಯು ಜೀವನದ ನಾನಾ ಆಯಾಮ, ಧ್ಯೇಯ, ತತ್ವ-ಸಿದ್ಧಾಂತಗಳ ಸಮನ್ವಯ ಸ್ವರೂಪವಾಗಿರುವುದು ಅವರ ಜನಪದ ಹಾಡು ಮತ್ತು ಮೌಖಿಕ ಸಾಹಿತ್ಯದಿಂದ ಗೋಚರವಾಗುತ್ತದೆ ಎಂದು ಸಮಾಜದ ಮುಖಂಡರು ಅಭಿಪ್ರಾಯಿಸಿದರು.  

ಶ್ರೀ ಸೇವಾಲಾಲ್ ಮಹಾರಾಜರ 285ನೇ ಜಯಂತ್ಯೋತ್ಸವದ ಅಂಗವಾಗಿ ತಾಲೂಕಿನ ಮಾಡಗೇರಿ ತಾಂಡಾದಲ್ಲಿ 22ನೇ ವರ್ಷದ  ಮಾಲಾಧಾರಿಗಳ ಪಾದಯಾತ್ರೆ ಕಾರ್ಯಕ್ರಮದಲ್ಲಿ  ಮಾತನಾಡಿದರು.

ಈ ನಮ್ಮ ಪುಣ್ಯ ಭೂಮಿಯಲ್ಲಿ ಶ್ರೀ ಭೀಮಾನಾಯ್ಕ, ಧರ್ಮಿಣಿ ಮಾತೆಯ ಜೇಷ್ಠ ಪುತ್ರ ಬಂಜಾರ್ ಜನಾಂಗದ ಆರಾಧ್ಯ ದೇವ, ಬ್ರಹ್ಮಚಾರಿಯಾಗಿ ಮಹಾ ಪವಾಡ ಪುರುಷರಾಗಿ ಬಂಜಾರ ಜನಾಂಗದ ಉದ್ಧಾರಕ್ಕಾಗಿ ಶ್ರಮಿಸಿದ ಧಾರ್ಮಿಕ ಗುರುಗಳ ಹೆಸರಿನಲ್ಲಿ ಧರಿಸಿರುವ ಮಾಲೆ ಬಹಳ ಪವಿತ್ರವಾದದ್ದು, ಎಲ್ಲರೂ ಭಕ್ತಿಯಿಂದ ಶ್ರದ್ಧೆಯಿಂದ ನಡೆದುಕೊಳ್ಳುತ್ತಾರೆ.

ಸಂತ ಶ್ರೀ ಸೇವಾಲಾಲ್ ಜಗದ್ಗುರುಗಳ ದಯೆಯಿಂದ ಅಶಾಂತಿ, ಅಜ್ಞಾನ, ಅಂಧಕಾರ, ಅಹಂಕಾರವನ್ನು ಹೋಗಲಾಡಿಸಿ ಶಾಂತಿ, ದಯೆ, ಕರುಣೆ, ಭಕ್ತಿಯಿಂದ ಮುಕ್ತಿ ಹೊಂದಿ ಜ್ಞಾನದ ಜ್ಯೋತಿ ಬೆಳಗಿಸಲು ಈ ಮಹಾ ಪುರುಷನ ಹೆಸರಿನಲ್ಲಿ ಮಾಲೆ ಧರಿಸಿರುವ ಮಾಲಾಧಾರಿಗಳಿಗೆ ಪ್ರತಿವರ್ಷ ಕೈಲಾದಷ್ಟು ಸಹಾಯವನ್ನು ಭಕ್ತಾದಿಗಳು ನೀಡುತ್ತಾರೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ  ಮಾಡ್ಲಗೇರಿ ತಾಂಡಾದ ಹಟ್ಟಿನಾಯ್ಕ ಎಂ.ಪಿ.ನಾಯ್ಕ, ಡಾವೋ ಗೇಮ್ಯಾನಾಯ್ಕ, ಕಾರಬಾರಿ ಯಂಕ್ಯಾನಾಯ್ಕ, ಗ್ರಾ.ಪಂ.ಸದಸ್ಯ ಎಂ. ಹಾಲೇಶ್ ನಾಯ್ಕ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ನಾಗೇಂದ್ರ ನಾಯ್ಕ,   ಗ್ರಾ.ಪಂ. ಮಾಜಿ ಸದಸ್ಯ ಆರ್.ಮಲ್ಲೇಶ್ ನಾಯ್ಕ,  ಎಂ. ಕೊಟ್ರೇಶ್ ನಾಯ್ಕ, ವಿ. ಮಲ್ಲೇಶ್ ನಾಯ್ಕ, ಪೂಜಾರಿ ಶೇಖರ್ ನಾಯ್ಕ, ಆರ್. ಚೆನ್ನವೀರನಾಯ್ಕ, ಚುಣ್ಯಾನಾಯ್ಕ, ಲಂಕೇಶ್ ನಾಯ್ಕ, ಎಂ.ಎಸ್.ನಾಯ್ಕ, ವಿ.ರಾಮನಾಯ್ಕ, ಡಿ.ರಮೇಶ್ ನಾಯ್ಕ, ವಿ.ಗಣೇಶ್ ನಾಯ್ಕ, ಎಲ್. ಭೀಮಾನಾಯ್ಕ,   ಹೋಭ್ಯಾನಾಯ್ಕ, ಬಿ.ಯುವರಾಜ್ ನಾಯ್ಕ, ಕೃಷ್ಣನಾಯ್ಕ, ಎಂ.ರಮೇಶ್ ನಾಯ್ಕ, ಹೆಚ್. ಮಹೇಶ್ ನಾಯ್ಕ,  ವಿ.ಸಂತೋಷ್ ನಾಯ್ಕ, ಜಿ.ಶಂಕರ್ ನಾಯ್ಕ, ಪ್ರವೀಣ್ ಕುಮಾರ್, ಡಿ.ಮಲ್ಲೇಶ್ ನಾಯ್ಕ ಸೇರಿದಂತೆ ಇತರರು ಉಪಸ್ಥಿತರಿದ್ದರು.

error: Content is protected !!