ದಾವಣಗೆರೆ, ಫೆ. 12- ನಗರದ ಜಿಲ್ಲಾ ಕ್ರೀಡಾಂಗಣದ ಪಕ್ಕದಲ್ಲಿ `ಸಿರಿಗನ್ನಡಂ ಭೋಜನಾಲಯ’ ಹಸಿದವರಿಗೆ ಉಚಿತ ಊಟ ಕಾರ್ಯಕ್ರಮವನ್ನು ಆರಂಭಿಸಲಾಯಿತು.
ಮಧ್ಯ ಕರ್ನಾಟಕದ ದಾವನಣಗೆರೆ ನಗರಕ್ಕೆ ವೈಯಕ್ತಿಕ ಕೆಲಸ, ಆಸ್ಪತ್ರೆಗೆ ಮತ್ತು ಬೇರೆ ಬೇರೆ ಕೆಲಸಗಳಿಗೆ ಬರುವ ಸಾರ್ವಜನಿಕರಿಗೆ ಪ್ರತಿ ದಿನ ಮಧ್ಯಾಹ್ನ 1 ಗಂಟೆಗೆ ಉಚಿತ ಊಟ ವಿತರಣೆ ಮಾಡಲಾಗುವುದು.
ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಸ್ಥಾಪಕ ರಾಜ್ಯಾಧ್ಯಕ್ಷ ಟಿ. ವೆಂಕಟೇಶ್ ಕಣ್ಣಾಳರ, ಇಎನ್‌ಟಿ ತಜ್ಞ ಡಾ. ಎ.ಎಂ. ಶಿವಕುಮಾರ್, ಮಾಜಿ ಮೇಯರ್ ಎಸ್.ಟಿ. ವೀರೇಶ್, ಡಿ.ಎಸ್. ಸಿದ್ಧಣ್ಣ, ಎಸ್.ಕೆ. ಬಸವರಾಜ್, ಎಸ್.ಜಿ. ಹಾಲೇಶಪ್ಪ, ಹೆಚ್.ಸಿ. ಬಸವರಾಜು, ಗುತ್ತೇಶ್, ನಾಗಭೂಷಣ, ಶಿವರಾಜ್, ರಾಜೇಶ್ವರಿ ಅಂಜನಪ್ಪ, ಹೊನ್ನಮ್ಮ, ಎಂ.ಎಸ್. ಬಸಣ್ಣ, ಹುಲ್ಲುಮನಿ ಠಾಕೂರು ಮತ್ತಿತರರು ಭಾಗವಹಿಸಿದ್ದರು.