ಉಚಿತ ಕಣ್ಣಿನ ಆರೋಗ್ಯ ತಪಾಸಣಾ ಶಿಬಿರ

ಉಚಿತ ಕಣ್ಣಿನ ಆರೋಗ್ಯ ತಪಾಸಣಾ ಶಿಬಿರ

ಜಗಳೂರು, ಫೆ. 9- ತಾಲ್ಲೂಕಿನ ಅಣಬೂರು ಗ್ರಾಮದಲ್ಲಿ ಈಚೆಗೆ ಉಚಿತ ಕಣ್ಣಿನ ತಪಾಸಣೆಯನ್ನು ವಿಕಾಸ ಗ್ರಾಮೀಣಾಭಿವೃದ್ಧಿ ಸ್ವಯಂ ಸೇವಾ ಸಂಸ್ಥೆ ಹಾಗೂ ದೃಷ್ಟಿ ಕಣ್ಣಿನ ಆಸ್ಪತ್ರೆ (ಚಿತ್ರದುರ್ಗ) ಇವರ ಸಂಯುಕ್ತಾಶ್ರಯದಲ್ಲಿ ನಡೆಸಲಾಯಿತು. ಈ ಸಂದರ್ಭದಲ್ಲಿ ನುರಿತ ವೈದ್ಯರುಗಳಾದ ಡಾ. ಕೀರ್ತಿ ಕುಮಾರ್, ಡಾ. ಶಂಕರ್‌ಗೌಡ, ಡಾ. ಭರತ, ಡಾ. ಪ್ರಹ್ಲಾದ್, ಕೆ. ಮಹಾಲಕ್ಷ್ಮಿ ಕರಿಬಸಪ್ಪ, ಬಿ. ಸಿದ್ದಲಿಂಗಪ್ಪ ಉಪಸ್ಥಿತರಿದ್ದರು.

error: Content is protected !!