ಪತ್ರಕರ್ತ ಚಿದಾನಂದ ಅವರಿಗೆ ಸನ್ಮಾನ

ಪತ್ರಕರ್ತ ಚಿದಾನಂದ ಅವರಿಗೆ ಸನ್ಮಾನ

ಹರಿಹರ, ಜ. 5- ನಗರದ ಹೊರವಲಯದ ಅಮರಾವತಿ ಕಾಲೋನಿಯ ಶ್ರೀ ಶಿರಡಿ ಸಾಯಿಬಾಬಾ ಮತ್ತು ಜಗಜ್ಯೋತಿ ಬಸವೇಶ್ವರ ದೇವಸ್ಥಾನ ಸಮಿತಿ ವತಿಯಿಂದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಸದ್ಭಾವನಾ ಪ್ರಶಸ್ತಿಯನ್ನು ಪಡೆದಿರುವುದಕ್ಕೆ ಪತ್ರಕರ್ತ ಎಂ. ಚಿದಾನಂದ ಕಂಚಿಕೇರಿ ಅವರನ್ನು ಸನ್ಮಾನಿಸಿ, ಗೌರವಿಸಿದರು. 

ಈ ಸಂದರ್ಭದಲ್ಲಿ ಅಮರಾವತಿ ಮಾಜಿ ಪ್ರಧಾನ ಗೌಡ್ರು ಪರಮೇಶ್ವರಪ್ಪ, ರಾಘವೇಂದ್ರ ಸ್ವಾಮಿ ಮಠದ ಭಜನಾ ಸಂಘದ ಮುಖ್ಯಸ್ಥ ಪವನ್ ಆಚಾರ್ಯ, ಪುಟ್ಟಮ್ಮ, ಮಂಜುಳಾ ಮತ್ತು ಇತರರು ಹಾಜರಿದ್ದರು. 

error: Content is protected !!