ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಚನ ಶಿಬಿರ

ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಚನ ಶಿಬಿರ

ದಾವಣಗೆರೆ, ಫೆ. 4 – ಡಾ. ಪಂಡಿತ ಪುಟ್ಟರಾಜ ಸೇವಾ ಸಮಿತಿ ಗದಗ, ಜಿಲ್ಲಾ ಮಹಿಳಾ ಘಟಕ ದಾವಣಗೆರೆ ಮತ್ತು ವಚನಾಮೃತ ಬಳಗದ ಸಹಯೋಗದಲ್ಲಿ  ಪಂಚಾಕ್ಷರಿ ಗವಾಯಿಗಳವರ ಜಯಂತಿ ಪ್ರಯುಕ್ತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಚನ ಶಿಬಿರ ಮತ್ತು ಕವಿಗೋಷ್ಠಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

 ಕಾರ್ಯಕ್ರಮದಲ್ಲಿ `ಕಲೆಗೆ ಕಣ್ಣಿಟ್ಟ ಪೂಜ್ಯರು’ ಎಂಬ ವಿಚಾರದ ಬಗ್ಗೆ ತುಂಬಾ ಅರ್ಥಗರ್ಭಿತವಾಗಿ ಪೂಜ್ಯರ ಬಗ್ಗೆ ಸ್ವರಚಿತ ಕವನವನ್ನು ಮಾ.ಬಾ ನಾಗರಾಜ್ ಕುಂದೂರು, ಶ್ರೀಮತಿ ಉಷಾ ಇ., ಶ್ರೀಮತಿ ಜ್ಯೋತಿ ಬೆಳಗಾವಿ, ಕೆ.ಎಚ್. ಮರಿ ರಾಜು ಭಾನುವಳ್ಳಿ , ಶ್ರೀಮತಿ ಜ್ಯೋತಿ ಎಸ್. ಪ್ರಸ್ತುತ ಪಡಿಸಿದರು. ಕವಿಗೋಷ್ಠಿಯಲ್ಲಿ ಭಾಗವಹಿಸಿದವರಿಗೆ ಸರ್ಟಿಫಿಕೇಟ್ ನೀಡಿ ಗೌರವಿಸಲಾಯಿತು. ಶಾಲೆಯ ಮಕ್ಕಳಿಗೆ ಎರಡು ದಿನಗಳ ಕಾಲ ವಚನ ಶಿಬಿರವನ್ನು ನಡೆಸಿ ಮಕ್ಕಳಿಗೆ ವಚನ ಗಾಯನ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಮಕ್ಕಳು ಸ್ಪರ್ಧೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬಹುಮಾನವನ್ನು ಗಳಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶಿವಬಸವ ಸ್ವಾಮಿ ಪಿ. ಚರಂತಿಮಠ ಇವರು ಪಂಚಾಕ್ಷರಿ ಗವಾಯಿಗಳವರ ಜೀವನ ಚರಿತ್ರೆಯನ್ನು ತುಂಬಾ ಅದ್ಭುತವಾಗಿ ಎಲ್ಲರ ಮನಮುಟ್ಟುವ ಹಾಗೆ ಸಂಕ್ಷಿಪ್ತವಾಗಿ ತಿಳಿಸಿಕೊಟ್ಟರು.ಕಾರ್ಯಕ್ರಮ ಕುರಿತು ಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಕಲ್ಲಮ್ಮ ಮಾತನಾಡಿದರು.

ಶ್ರೀಮತಿ ಸೌಮ್ಯ ಸತೀಶ್ ಅಧ್ಯಕ್ಷರು ಜಿಲ್ಲಾ ಮಹಿಳಾ ಘಟಕ ದಾವಣಗೆರೆ ಇವರು ಅಧ್ಯಕ್ಷೀಯ ನುಡಿಗಳನ್ನಾಡಿದರು. ಕವಿಗೋಷ್ಠಿ ಕಾರ್ಯಕ್ರಮವನ್ನು ಶ್ರೀಮತಿ ಮಮತಾ ನಾಗರಾಜ್ ಪ್ರಧಾನ ಕಾರ್ಯದರ್ಶಿ ಜಿಲ್ಲಾ ಮಹಿಳಾ ಘಟಕ ಇವರು ನಡೆಸಿಕೊಟ್ಟರು. ಸಹ ಕಾರ್ಯದರ್ಶಿ ಶ್ರೀಮತಿ ಮಧುಮತಿ ಗಿರೀಶ್ ಸ್ವಾಗತಿಸಿದರು. ಸಂಚಾಲಕರಾದ ಶ್ರೀಮತಿ ಶಶಿಕಲಾ ಶಂಭು ಇವರು ಮುಖ್ಯ ಅತಿಥಿಗಳ ಪರಿಚಯ ಮಾಡಿದರು. ಶ್ರೀಮತಿ ರೇಖಾ ಬೇತೂರ್ ಬಹುಮಾನ ವಿತರಣಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಶ್ರೀಮತಿ ಸುಮಾ ಬೇತೂರ್ ವಂದನಾರ್ಪಣೆ, ಸಂಘಟನಾ ಕಾರ್ಯದರ್ಶಿ ಶ್ರೀಮತಿ ಶಾಂತ ಶಿವಶಂಕರ್ ನಿರೂಪಿಸಿದರು. 

ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು, ಸಿಬ್ಬಂದಿ ವರ್ಗದವರು, ಶರಣ ಸಾಹಿತ್ಯ ಪರಿಷತ್ತಿನ ಸದಸ್ಯರು, ಪುಟ್ಟರಾಜ ಸೇವಾ ಸಮಿತಿಯ ಸದಸ್ಯರು, ವಚನಾಮೃತ ಬಳಗದವರು ಭಾಗವಹಿಸಿದ್ದರು. ಉಮಾ, ತನುಜಾ ಬೆಳ್ಳುಳ್ಳಿ, ಉಮಾ, ಶಶಿಕಲಾ, ಸೀಮಾ, ದೀಪಾ ಕಿರಣ್, ದೀಪ ದೇವರಾಜ್ ಕಾರ್ಯಕ್ರಮದ ಬಹುಮಾನದ ಪ್ರಾಯೋಜಕರಾಗಿದ್ದರು.

error: Content is protected !!