ಹರಿಹರ, ಫೆ. 4 – ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಇದೇ ದಿನಾಂಕ 8 ಮತ್ತು 9 ರಂದು ಜರುಗಲಿರುವ 6ನೇ ವರ್ಷದ ವಾಲ್ಮೀಕಿ ಜಾತ್ರೆ ಅಂಗವಾಗಿ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬೃಹತ್ ಬೈಕ್ ರ‍್ಯಾಲಿಗೆ ಶ್ರೀ ವಾಲ್ಮೀಕಿ ಪ್ರಸನ್ನಾನಂದಾ ಸ್ವಾಮೀಜಿ ಹರಿಹರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಚಾಲನೆ ನೀಡಿದರು.
ಶಾಸಕ ಬಿ.ಪಿ. ಹರೀಶ್, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ, ಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ಮಠದ ಧರ್ಮದರ್ಶಿ ಕೆ.ಬಿ. ಮಂಜುನಾಥ್, ಹರಿಹರ ತಾಲ್ಲೂಕು ನಾಯಕ ಸಮಾಜದ ಅಧ್ಯಕ್ಷ ಜಿಗಳಿ ರಂಗಪ್ಪ, ಹರಿಹರ ಗ್ರಾಮಾಂತರ ಜಾತ್ರಾ ಸಮಿತಿ ಅಧ್ಯಕ್ಷ ಕೊಕ್ಕನೂರು ಸೋಮಶೇಖರ್, ಹರಿಹರ ನಗರ ಸಭೆ ಸದಸ್ಯ ದಿನೇಶ್ ಬಾಬು, ಮಾರುತಿ ಬೇಡರ, ಮಕರಿ ಪಾಲಾಕ್ಷಪ್ಪ, ಕೆ. ಬೇವಿನಹಳ್ಳಿಯ ಬಿ.ಎಂ. ಹಾಲೇಶ್, ಶ್ರೀಮತಿ ಪಾರ್ವತಿ ಬೋರಯ್ಯ, ಶ್ರೀಮತಿ ವಿಜಯ, ಶ್ರೀ ಮಹೇಂದ್ರ ಕುಮಾರ್, ಶ್ರೀಮತಿ ಗೌರಮ್ಮ ಮಂಜುನಾಥ್, ಜಿಗಳಿಯ ಬೆಣ್ಣೇರ್ ನಂದೆಪ್ಪ, ಬೈಕ್ ರ‍್ಯಾಲಿ ಆಯೋಜಕರಾದ ಭರತ್ ಮುದೇನೂರು, ದೊಡ್ಮನಿ ಬಸವರಾಜ್, ಕಜ್ಜರಿ ಹರೀಶ್, ಕರೂರು ಹನುಮಂತ, ಬೆಳ್ಳೂಡಿ ಹನುಮಂತಪ್ಪ, ಧನರಾಜ್ ಭಾನುವಳ್ಳಿ ಧನ್ಯಕುಮಾರಿ ಸೇರಿದಂತೆ ನೂರಾರು ಯುವಕರು ಭಾಗವಹಿಸಿದ್ದರು.
ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ಬೈಕ್ ರ‍್ಯಾಲಿಯ ನಂತರ ಕೋಡಿಯಾಲ ಹೊಸಪೇಟೆ, ರಾಜನಹಳ್ಳಿ ಮೂಲಕ ವಾಲ್ಮೀಕಿ ಗುರು ಪೀಠ ತಲುಪಿತು.