ದೇವಸ್ಥಾನಗಳ ಜೊತೆ ಶಾಲೆ ಪ್ರಾರಂಭಿಸಿ ಶ್ರೀ ಈಶ್ವರಾನಂದ ಪುರಿ ಸ್ವಾಮೀಜಿ ಸಲಹೆ

ದೇವಸ್ಥಾನಗಳ ಜೊತೆ ಶಾಲೆ ಪ್ರಾರಂಭಿಸಿ  ಶ್ರೀ ಈಶ್ವರಾನಂದ ಪುರಿ ಸ್ವಾಮೀಜಿ ಸಲಹೆ

ದಾವಣಗೆರೆ, ಫೆ.4- `ನೂರು ದಿನ ಸಾವಿರ ಹಳ್ಳಿ ಒಂದು ಗುರಿ’ ಕಾರ್ಯಕ್ರಮದಲ್ಲಿ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ  ಬೀರೇಶ್ವರ ಬಡಾವಣೆ, ಸರಸ್ವತಿ ನಗರ, ಜಯನಗರಕ್ಕೆ ಭೇಟಿ ನೀಡಿದರು.

 ರಾಜ್ಯದಲ್ಲಿ  ಸುಮಾರು ಮೂರು ಸಾವಿರ ಬೀರೇಶ್ವರ ದೇವಸ್ಥಾನಗಳಿವೆ. ಆ ದೇವಸ್ಥಾನದ ಜೊತೆಯಲ್ಲಿ ಒಂದು ಶಾಲೆ ನಿರ್ಮಾಣ ಮಾಡಿದ್ದರೆ ಶಿಕ್ಷಣದ ಕ್ರಾಂತಿಯೇ ಆಗಿ ಬಿಡುತ್ತಿತ್ತು. ಇನ್ನು ಮುಂದಾದರೂ ಸಮಾಜದವರು ಜಾಗೃತರಾಗಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕಾಗಿದೆ. ಪ್ರಸ್ತುತವಾಗಿ ಶಿಕ್ಷಣ ಕಲಿತರೇ ನಾವು ಮತ್ತು ಸಮಾಜ ಬದಲಾವಣೆಯಾಗಲು ಸಾಧ್ಯವಿದೆ ಎಂದರು.

ಪ್ರತಿ ಮನೆಗಳಿಗೆ ಭೇಟಿ ನೀಡಿ ಸಮುದಾಯದ ಮುಖಂಡರೊಂದಿಗೆ  ಚರ್ಚಿಸಿ ಸಮಾಜದ ಅಭಿವೃದ್ಧಿಗೆ ಎಲ್ಲರ ಸಹಕಾರ ಪಡೆದು. ಸಾಮಾಜಿಕ-ಶೈಕ್ಷಣಿಕ ಪ್ರಗತಿಗಾಗಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಶ್ರೀಗಳು ಕರೆ ನೀಡಿದರು.  ಈ ಸಂದರ್ಭದಲ್ಲಿ ಕನಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹದಡಿ ಬಸಣ್ಣ, ಉಪಾಧ್ಯಕ್ಷ ಎಸ್. ಟಿ. ಅರವಿಂದ್, ಕಾರ್ಯದರ್ಶಿ ಬಿ. ಕೆ. ಕೊಟ್ರೇಶ್, ಗಣೇಶ ದಳವಾಯಿ, ಶಂಕರಮೂರ್ತಿ, ಉಮೇಶ್, ಬೀರಲಿಂಗಪ್ಪ, ಟೈಲ್ಸ್ ಪುಟ್ಟಣ್ಣ, ಡಾ. ಮಹಾಂತ, ಆರ್. ಎಫ್. ಬೀರಲಿಂಗಪ್ಪ ಉಪಸ್ಥಿತರಿದ್ದರು.

error: Content is protected !!