ದಾವಣಗೆರೆ, ಫೆ. 4 – ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ವತಿಯಿಂದ ಕ್ರೀಡೆಗಳ ಮೂಲಕ ಮಹಿಳೆಯರ ಸಬಲೀಕರಣಕ್ಕಾಗಿ ಖೇಲೋ ಇಂಡಿಯಾ ಅಡಿಯಲ್ಲಿ ನಗರದ ಲೂರ್ಡ್ಸ್ ಬಾಯ್ಸ್ ಸ್ಕೂಲ್ ಆವರಣದಲ್ಲಿ ಜರುಗಿದ ಪ್ರಪ್ರಥಮ ರಾಜ್ಯಮಟ್ಟದ ಮಹಿಳಾ ಪುಟ್ಬಾಲ್ ಪಂದ್ಯಾವಳಿಗಳ ಸಮಾರೋಪ ಸಮಾರಂಭದಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನೂ ಸಹ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕ್ರೀಡಾ ಕ್ಷೇತ್ರಗಳಲ್ಲಿ ಸಾಧನಗೈದ ಕ್ರೀಡಾಪಟುಗಳಾದ ರಾಷ್ಟ್ರೀಯ ಕೇರಂ ಪಟು ಕೆ.ಎಸ್. ವಿಜಯಕುಮಾರ್, ಪವರ್ಲಿಫ್ಟಿಂಗ್ ರಾಷ್ಟ್ರೀಯ ತೀರ್ಪುಗಾರರಾದ ಶ್ರೀಮತಿ ಲಕ್ಷ್ಮೀದೇವಿ, ರಾಜ್ಯಮಟ್ಟದ ಕೇರಂ ಚಾಂಪಿಯನ್ ಶಿವಕುಮಾರ್, ರಾಷ್ಟ್ರೀಯ ಪವರ್ ಲಿಫ್ಟರ್ ಗೋಪಾಲ್ ಜಿ. ಸ್ಟ್ರಾಂಗ್ಮ್ಯಾನ್ ಆಫ್ ಇಂಡಿಯಾ ಆದ ಎ. ಚಂದ್ರಪ್ಪ ಅವರುಗಳಿಗೆ ಎಸ್.ಎಸ್.ಕೇರ್ ಟ್ರಸ್ಟ್ನ ಅಧ್ಯಕ್ಷರಾದ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ್ ರವರು ಸನ್ಮಾನಿಸಿ, ಗೌರವಿಸಿದರು.
ದಾವಣಗೆರೆ ಜಿಲ್ಲಾ ಪುಟ್ಭಾಲ್ ಅಸೋಸಿಯೇಷನ್ ಅಧ್ಯಕ್ಷರಾದ ದಿನೇಶ್ ಕೆ. ಶೆಟ್ಟಿ, ಶ್ರೀಮತಿ ಲತಿಕಾ ದಿನೇಶ್ ಕೆ. ಶೆಟ್ಟಿ, ಕೇರಂ ಗಣೇಶ್, ಪುಟ್ಭಾಲ್ ಸಂಸ್ಥೆಯ ಅಶೋಕ್, ಸೈಯದ್, ನವಜಿತ್ ಬಳೆಗಾರ, ಮೊಹಮ್ಮದ್, ಯುವರಾಜ್, ಸಾಧಿಕ್ ಮತ್ತಿತರರು ಉಪಸ್ಥಿತರಿದ್ದರು.