ದಾವಣಗೆರೆ, ಫೆ.4- ಭಾರತೀಯ ಶಿಕ್ಷಣ ಮತ್ತು ಸಂಸ್ಕೃತಿಯನ್ನು ಪರಿಪೂರ್ಣ ತತ್ವದಲ್ಲಿ ತಿಳಿಸುವ ಏಕೈಕ ಸಂಸ್ಥೆಯಾಗಿರುವ ರಾಷ್ಟ್ರೋತ್ಥಾನ ಪರಿಷತ್‌ನ ಅಂಗ ಸಂಸ್ಥೆಗಳು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿವೆ ಎಂದು ಹಾವೇರಿ ಜಿಲ್ಲೆ ಗೋಟಗೋಡಿಯ ಕರ್ನಾಟಕ ಜನಪದ ವಿಶ್ವ ವಿದ್ಯಾಲಯದ ಉಪಕುಲಪತಿ ಪ್ರೊ. ಟಿ. ಎಂ. ಭಾಸ್ಕರ್ ಅಭಿಪ್ರಾಯಿಸಿದರು.
ನಗರದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ದಲ್ಲಿ ಈಚೆಗೆ ಹಮ್ಮಿಕೊಳ್ಳಲಾಗಿದ್ದ `ಅಮೃತ ಭಾರತಿಗೆ ಕನ್ನಡದಾರತಿ’ ಕಲಾಯಾನ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು.
ಶಾಲೆಗಳು ಗುರುಕುಲಗಳಾಗಿ, ಪಾಲಕ- ಪೋಷಕರು ಜವಾಬ್ದಾರಿಯುತರಾಗಿ ಕೈಜೋಡಿಸಿ ದಾಗ ಮಾತ್ರ ಆರೋಗ್ಯವಂತ, ಧನಾತ್ಮಕ ವ್ಯಕ್ತಿತ್ವವನ್ನು ರೂಪಿಸಲು ಸಾಧ್ಯ ಎಂದು ಅವರು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲಾ ಸಮಿತಿಯ ಸದಸ್ಯರಾದ ವಿನಾಯಕ ರಾನಡೆ, ಸ್ವಸ್ಥ, ಸುಸ್ಥಿರ ಸಮಾಜ ನಿರ್ಮಾಣಕ್ಕೆ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಪಾತ್ರ ಪ್ರಮುಖವಾಗಿದೆ ಎಂದು ತಿಳಿಸಿದರು.
ಮತ್ತೋರ್ವ ಮುಖ್ಯ ಅತಿಥಿ ಹೆಗ್ಡೆ ಡಯಾ ಗ್ನೋಸ್ಟಿಕ್ ಸೆಂಟರ್‌ನ ಡಾ.ಕಿರಣ್ ಕುಮಾರ್ ಹೆಗ್ಡೆ ಮಾತನಾಡಿ, ವಿದ್ಯೆಯಿಂದ ಸಕಲವನ್ನು ಸಂಪಾದಿಸಬಹುದು, ಸುಶಿಕ್ಷಿತ ಸಮಾಜ ನಿರ್ಮಾಣದಲ್ಲಿ ವಿದ್ಯೆಯ ಪಾತ್ರ ಪ್ರಮುಖವಾಗಿದೆ ಎಂದು ತಿಳಿಸಿದರು.
ಸಂಸ್ಥೆಯ ಕಾರ್ಯದರ್ಶಿ ಜಯಣ್ಣ, ಶಾಲಾ ಸಮಿತಿಯ ಸದಸ್ಯರಾದ ಶ್ರೀಮತಿ ಭಾರತಿ ಹೆಗಡೆ, ಪ್ರಾಂಶುಪಾಲ ಮಂಜುನಾಥ್, ಶೈಕ್ಷಣಿಕ ಸಂಯೋಜಕ ಶಿವರಾಜ್ ಮತ್ತಿತತರು ಉಪಸ್ಥಿತರಿದ್ದರು.
ಸುವರ್ಣ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಮೊದಲ ದಿನದ ಕಲಾಯಾನದಲ್ಲಿ ವಿದ್ಯಾರ್ಥಿಗಳು ಅಭಿನಯಿಸಿದ ಕನ್ನಡ ನಾಡು, ನುಡಿ, ರಾಜ ಮನೆತನ, ಸಾಹಿತ್ಯ, ಸಂಸ್ಕೃತಿ, ಇತಿಹಾಸ, ಕವಿಗಳು, ಸೈನಿಕರ ಬಗೆಗಿನ ನಾಟಕ, ಹಾಡು, ನೃತ್ಯಗಳು ಗಮನ ಸೆಳೆದವು.
ಶೋಭಾ ಮತ್ತು ವೀಣಾ ಪ್ರಸಾದ್ ಪ್ರಾರ್ಥಿಸಿದರು. ನಯನಶ್ರೀ ಸ್ವಾಗತ ನೃತ್ಯ ಮಾಡಿದರು. ನಿರೂಪಣೆ ಯನ್ನು ಶ್ವೇತಾ, ಸ್ವಾಗತವನ್ನು ಪುಷ್ಪಾ, ವಂದನಾರ್ಪಣೆಯನ್ನು ಸುಮಾ ಮಾಡಿದರು.