ಒಳಮೀಸಲಾತಿ ವರ್ಗೀಕರಣ ನಿಸ್ಸಂಶಯ

ಒಳಮೀಸಲಾತಿ ವರ್ಗೀಕರಣ ನಿಸ್ಸಂಶಯ

ದಾವಣಗೆರೆ, ಫೆ.2 – ನಿವೃತ್ತ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯಂತೆ ಒಳಮೀಸಲಾತಿ ವರ್ಗೀಕರಣ ಆಗುವುದು ನಿಸ್ಸಂಶಯ ಎಂದು ನಿವೃತ್ತ ಐಎಎಸ್ ಅಧಿಕಾರಿ ಬಿ.ಎಚ್. ಅನಿಲ್‌ಕುಮಾರ್ ಹೇಳಿದರು.

ನಗರದ ಚನ್ನಗಿರಿ ಕೇಶವಮೂರ್ತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ `ರಾಜ್ಯದ ಎಲ್ಲೆಡೆ ಮಾದಿಗ ಮುನ್ನಡೆ’ ಜಿಲ್ಲಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಒಳಮೀಸಲು ವರ್ಗೀಕರಣದ ಮೊದಲ ಹಂತದ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ 2024ರ ಜ. 17ರಿಂದ ಆರಂಭವಾಗಲಿದೆ. ಯಾವುದೇ ಅಡ್ಡಿ ಆತಂಕ ಎದುರಾದರೂ ನಮ್ಮ ಪರವಾದ ತೀರ್ಪು ಬರುವುದು ನಿಶ್ಚಿತ. ಯಾರಲ್ಲೂ ಸಂದೇಹ ಬೇಡ ಎಂದು ಹೇಳಿದರು.

ಹೈಕೋರ್ಟ್ ವಕೀಲ ವೆಂಕಟೇಶ್ ದೊಡ್ಡೇರಿ ಮಾತನಾಡಿದರು. 

ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಬೆಟ್ಟಹಳ್ಳಿ ಒಳಮೀಸಲಾತಿ ಅಗತ್ಯತೆ ಕುರಿತು ಸಾಕ್ಷ್ಯ ಚಿತ್ರ ಪ್ರದರ್ಶಿಸಿದರು. ಮುಖಂಡ ಆಲೂರು ನಿಂಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. 

ಮಾಜಿ ಶಾಸಕ ಪ್ರೊ.ಎನ್. ಲಿಂಗಣ್ಣ, ನಿವೃತ್ತ ಐಎಎಸ್ ಅಧಿಕಾರಿ ಪುರುಷೋತ್ತಮ, ಮಾದಿಗ ಮಹಾಸಭಾ ರಾಜ್ಯಾಧ್ಯಕ್ಷ ಮುತ್ತಣ್ಣ ಬೆಣ್ಣೂರು, ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಶಿವಪ್ಪ ಶಿಕಾರಿಪುರ, ಜಿ.ಎಚ್. ಮೋಹನ್‌ಕುಮಾರ್, ಕಣವಿಹಳ್ಳಿ ಮಂಜುನಾಥ್, ಜಯಪ್ರಕಾಶ್, ಎಲ್.ಡಿ.ಗೋಣೆಪ್ಪ, ಉಮೇಶ್ ಹೊನ್ನಾಳಿ, ಕಾಂತರಾಜ್, ಗುಮ್ಮನೂರು ರಾಮಚಂದ್ರ, ಗೋವಿಂದಪ್ಪ, ಶಾಮನೂರು ರಾಜು ಇತರರಿದ್ದರು.

error: Content is protected !!