ವಿನೋಬನಗರದಲ್ಲಿ ಕಾಮಗಾರಿಗಳಿಗೆ ಸಚಿವರಿಂದ ಗುದ್ದಲಿ ಪೂಜೆ

ವಿನೋಬನಗರದಲ್ಲಿ ಕಾಮಗಾರಿಗಳಿಗೆ ಸಚಿವರಿಂದ ಗುದ್ದಲಿ ಪೂಜೆ

ದಾವಣಗೆರೆ, ಜ. 29-  ಮಹಾನಗರ ಪಾಲಿಕೆ ವ್ಯಾಪ್ತಿಯ 16ನೇ ವಾರ್ಡ್ ವಿನೋಬನಗರದ 1ನೇ ಮೇನ್ 4ನೇ ಕ್ರಾಸ್‌ನಲ್ಲಿ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು 8 ಅಡ್ಡ ರಸ್ತೆಗಳಿಗೆ ಎಸ್‌ಎಫ್‌ಸಿ ಮುಕ್ತನಿಧಿ ಅನುದಾನ ಹಾಗೂ 15ನೇ ಹಣಕಾಸು ಯೋಜನೆಯ ಅನುದಾನದಿಂದ ಒಟ್ಟು 1.06 ಲಕ್ಷ ರೂ.ಗಳ ಸಿಸಿ ಚರಂಡಿ, ಯುಜಿಡಿ ಕಾಮಗಾರಿ ಸೇರಿದಂತೆ ಇತರೆ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಮಾತನಾಡಿ, ಜಿಲ್ಲೆಯ ಅಭಿವೃದ್ಧಿ ಹಿನ್ನಲೆಯಲ್ಲಿ ಸಾಕಷ್ಟು ಕೆಲಸಗಳು ನಮ್ಮ ಅವಧಿಯಲ್ಲಿ ದಾವಣಗೆರೆಯಲ್ಲಿ ನಡೆಯುತ್ತಿವೆ. 1.06 ಲಕ್ಷ ರೂ.ಗಳಲ್ಲಿ ಸುಮಾರು 8 ಅಡ್ಡ ರಸ್ತೆಗಳಿಗೆ ಸಿಸಿ ಚರಂಡಿ ಕಾಮಗಾರಿ ಹಾಗೂ 8 ಲಕ್ಷ ರೂ. ವೆಚ್ಚದ ಯುಜಿಡಿ ಕಾಮಗಾರಿಗಳನ್ನು ಇಲ್ಲಿ ಆರಂಭ ಮಾಡಲಾಗುತ್ತಿದೆ. ಇಲ್ಲಿ ಬಾಕ್ಸ್ ಚರಂಡಿ ಮಾಡಿ ಮುಚ್ಚುವುದಕ್ಕಿಂತ ಎಲ್ ಶೇಪ್‌ನಲ್ಲಿ ಚರಂಡಿ ಮಾಡಿರಿ. ಚರಂಡಿಗಳು ಓಪನ್ ಇದ್ದರೆ ಕಸ ನಿಲ್ಲುವುದಿಲ್ಲ ಹಾಗೂ ಕಸ ತೆಗೆಯುವವರಿಗೂ ಕೂಡಾ ಕಷ್ಟ ಆಗುವುದಿ ಲ್ಲ. ಬಾಕ್ಸ್ ಚರಂಡಿ ನಿರ್ಮಾಣಕ್ಕೆ ಖರ್ಚು ಕೂಡಾ ಜಾಸ್ತಿ ಆಗುತ್ತದೆ. ಚರಂಡಿಗಳನ್ನು ಸ್ಲಾಬ್ ಹಾಕಿ ಮುಚ್ಚಿದರೆ ಸರಿಯಾಗಿ ನಿರ್ವಹಣೆ ಮಾಡಲೂ ಆಗಲ್ಲ. ರಸ್ತೆಯನ್ನು ಮಾಡಿ, ಉಳಿದ ಜಾಗದಲ್ಲಿ  ಇಳಿಜಾರು ಮಾಡುವುದರಿಂದ ರಸ್ತೆ ನೀರು ಚರಂಡಿಗೆ ಸರಾಗವಾಗಿ ಹೋಗುತ್ತದೆ ಎಂದು ಇಂಜಿನಿಯರ್‌ಗಳಿಗೆ ಸಲಹೆ ನೀಡಿದರು. 

ವಾರ್ಡ್‌ನ ಮುಖಂಡರ ಪರವಾಗಿ ಪಾಲಿಕೆ ಸದಸ್ಯ ಎ.ನಾಗರಾಜ್ 1ನೇ ಮುಖ್ಯ ರಸ್ತೆಯ ಎರಡೂ ಬದಿ ಚರಂಡಿ ತುಂಬಾ ಹಳೆಯದಾಗಿದ್ದು, ಅದನ್ನು ಪೂರ್ಣ ಹೊಸದಾಗಿ ಮಾಡಬೇಕು, ರಸ್ತೆ ಕೂಡಾ ಹಾಳಾಗಿದೆ ಅದನ್ನೂ ಕೂಡಾ ಮಾಡಿಕೊಡಬೇಕೆಂದು ಎಸ್.ಎಸ್.ಮಲ್ಲಿಕಾರ್ಜುನ್‌ರಿಗೆ ಮನವಿ ಮಾಡಿದರು. 

ಮನವಿಗೆ ಸ್ಪಂದಿಸಿದ ಸಚಿವರು ಅದರೊಂದಿಗೆ 2ನೇ ಮುಖ್ಯ ರಸ್ತೆಯ ಚರಂಡಿ ಕೆಳಗೆ ಇದೆ, ರಸ್ತೆ ಮೇಲೆ ಇದೆ. ಇದನ್ನು ಸರಿಮಾಡಬೇಕು. ಚರಂಡಿ ಮೇಲೆ ಸ್ಲಾಬ್ ಹಾಕಿ, ಅದರ ಮೇಲೆ ಪಾರ್ಕಿಂಗ್ ಮಾಡುವಂತೆ ಮಾಡಿಸೋಣ, ಇದರಿಂದ ರಸ್ತೆ ಕೂಡಾ ಅಗಲವಾಗಿ ಕಾಣುತ್ತದೆ.  ಆ ರೀತಿ ಮಾಡಿಸೋಣ ಎಂದರು. 

ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತರಾದ ರೇಣುಕಾ, ಮಹಾಪೌರ ಬಿ.ಎಚ್. ವಿನಾಯಕ ಪೈಲ್ವಾನ್, ವಾರ್ಡ್‌ನ ಸದಸ್ಯ ಎ. ನಾಗರಾಜ್‌, ಪಾಲಿಕೆ ಸದಸ್ಯ ಕೆ. ಚಮನ್‌ಸಾಬ್, ಮಂಜುನಾಥ ಗಡಿಗುಡಾಳ್, ವಾರ್ಡ್ ಅಧ್ಯಕ್ಷ ಸುರೇಶ ಉತ್ತಂಗಿ, ಎಸ್.ರವಿ, ಸತೀಶ್‌ ಶೆಟ್ಟಿ, ರಮೇಶ ಸೋಲಾರ್, ರಾಮಚಂದ್ರ ರಾಯ್ಕರ್, ಚೌಡಪ್ಪ, ಯೋಗೀಶ, ರವಿ (ಸೊಸೈಟಿ), ಬಾಬು, ಹಾಲೇಶ್, ಕೆಇಬಿ ವಾಸಣ್ಣ, ಗುರುರಾಜ, ಸತೀಶ್‌ ಫ್ಯಾಮಿಲಿ ಸ್ಟುಡಿಯೋ, ಮಂಜುನಾಥ ಮಾಸೂರು, ರಮೇಶ, ಅನಿಲ್, ಇಇ ಮನೋಹರ, ಎಇಇ ಜಗದೀಶ, ಎಇ ನವೀನ್‌ಕುಮಾರ್, ಮಾರುತಿ, ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್‌ನ ಶಂಭುಲಿಂಗೇಶ್ವರ ದೇವಸ್ಥಾನ ಟ್ರಸ್ಟ್‌ನ ಪದಾಧಿಕಾರಿಗಳು ಸೇರಿದಂತೆ ಸ್ಥಳೀಯ ನಿವಾಸಿಗಳು ಭಾಗವಹಿಸಿದ್ದರು.

error: Content is protected !!