ಮಲೇಬೆನ್ನೂರಿನಲ್ಲಿ ಸಂವಿಧಾನ ಜಾಗೃತಿ ಜಾಥಾಕ್ಕೆ ಅದ್ಧೂರಿ ಸ್ವಾಗತ

ಮಲೇಬೆನ್ನೂರಿನಲ್ಲಿ ಸಂವಿಧಾನ ಜಾಗೃತಿ ಜಾಥಾಕ್ಕೆ ಅದ್ಧೂರಿ ಸ್ವಾಗತ

ಮಲೇಬೆನ್ನೂರು, ಜ.29- 75ನೇ ಗಣರಾಜ್ಯೋ ತ್ಸವದ ಅಂಗವಾಗಿ ಜಿಲ್ಲಾಡಳಿತದಿಂದ ದಾವಣಗೆರೆ ಜಿಲ್ಲೆ ಯಲ್ಲಿ ಸಂಚರಿಸುತ್ತಿರುವ ಸಂವಿಧಾನ ಜಾಗೃತಿ ಜಾಥಾವು ಸೋಮವಾರ ಪಟ್ಟಣಕ್ಕೆ ಆಗಮಿಸಿದಾಗ ಪುರಸಭೆ ಮುಂಭಾಗ ಅದ್ಧೂರಿಯಾಗಿ ಸ್ವಾಗತಿಸಲಾಯಿತು.

ಪುರಸಭೆ ಮುಖ್ಯಾಧಿಕಾರಿ ಎ.ಸುರೇಶ್, ಉಪತಹಶೀಲ್ದಾರ್ ಆರ್.ರವಿ ಹಾಗೂ ಪುರಸಭೆ ಸದಸ್ಯರು ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್, ಬುದ್ಧ, ಬಸವಣ್ಣ ಅವರ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಿ, ಗೌರವ ನಮನ ಸಲ್ಲಿಸಿದರು.

ಈ ವೇಳೆ ಬೀರಲಿಂಗೇಶ್ವರ ಬಾಲಕರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸಿ.ಜಯಣ್ಣ ಅವರು ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು.

ನಂತರ ಜಾಥಾವು ಪಟ್ಟಣದಲ್ಲಿ ಮೆರವಣಿಗೆ ಮಾಡಿ, ಕುಂಬಳೂರಿಗೆ ಬೀಳ್ಕೊಡಲಾಯಿತು.

ಪುರಸಭೆ ಸದಸ್ಯರಾದ ಗೌಡ್ರ ಮಂಜಣ್ಣ, ಬೆಣ್ಣೆಹಳ್ಳಿ ಸಿದ್ದೇಶ್, ಸಾಬೀರ್, ದಾದಾಪೀರ್, ಭೋವಿ ಶಿವು, ಕೆ.ಪಿ.ಗಂಗಾಧರ್, ಜನತಾ ಬಜಾರ್ ನಿರ್ದೇಶಕ ಪಿ.ಹೆಚ್.ಶಿವಕುಮಾರ್, ಆಶ್ರಯ ಸಮಿತಿ ಸದಸ್ಯರಾದ ಪೂಜಾರ್ ನಾರಾಯಣಪ್ಪ, ಪಕೃದ್ಧೀನ್, ಪೂಜಾರ್ ಬೀರಪ್ಪ, ಬಸವರಾಜ್ ದೊಡ್ಮನಿ, ಅಯೂಬ್ ಖಾನ್, ಭೋವಿ ಮಂಜಣ್ಣ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪಪ್ರಾಚಾರ್ಯ ಜಗದೀಶ್, ಉಜ್ಜಮ್ಮನವರ್, ದೈಹಿಕ ಶಿಕ್ಷಕ ಜಿ.ಹಾಲಪ್ಪ, ಸರ್ಕಾರಿ ಉರ್ದು ಪ್ರೌಢಶಾಲೆಯ ಮುಖ್ಯಶಿಕ್ಷಕ ಮಲ್ಲಿಕಾರ್ಜುನ್ ಸೇರಿದಂತೆ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸಮಾಜ ಕಲ್ಯಾಣ ಇಲಾಖೆಯ ಪ್ರಭಾರ ಸಹಾಯ ನಿರ್ದೇಶಕ ರಾಮಕೃಷ್ಣ ಮತ್ತು ಸೋಮಶೇಖರ್, ಪರಶುರಾಮ್, ಬಸವನಗೌಡ, ಮನೋಜ್, ಆನಂದ್, ವಾಹನ ಚಾಲಕ ಖಲೀಲ್ ಅಹ್ಮದ್ ಅವರು ಜಾಥಾ ದಲ್ಲಿದ್ದರು. ಇದಕ್ಕೂ ಮುನ್ನ ಜಾಥಾವು ಹೊಳೆಸಿರಿಗೆರೆ, ಯಲವಟ್ಟಿ, ಜಿಗಳಿಯಲ್ಲಿ ಸಂಚಿರಿಸಿ, ನಂತರ ಭಾನುವಳ್ಳಿ, ಬನ್ನಿಕೋಡು ಕೆ.ಬೇವಿನಹಳ್ಳಿಗೆ ತೆರಳಿತು.

error: Content is protected !!