ಬುದ್ಧಿಶಕ್ತಿ ಬೆಳವಣಿಗೆಗೆ ಚೆಸ್ ಸಹಕಾರಿ: ಮಲ್ಲೇಶ್

ಬುದ್ಧಿಶಕ್ತಿ ಬೆಳವಣಿಗೆಗೆ ಚೆಸ್ ಸಹಕಾರಿ: ಮಲ್ಲೇಶ್

ದಾವಣಗೆರೆ, ಜ.28- ಜಿಲ್ಲಾ ಚೆಸ್ ಅಸೋಸಿಯೇಷನ್ ವತಿಯಿಂದ ಗಣರಾಜ್ಯೋತ್ಸವದ ಅಂಗವಾಗಿ `ರಿಪಬ್ಲಿಕ್ ಡೇ ಕಪ್ ಓಪನ್ ರಾಪಿಡ್ ಚೆಸ್ ಪಂದ್ಯಾವಳಿ’ ನಗರದ ಗುರುಭವನದಲ್ಲಿ ಭಾನುವಾರ ನಡೆಯಿತು.

ಪತ್ರಕರ್ತ ಬಿ.ಎನ್. ಮಲ್ಲೇಶ್ ಪಂದ್ಯಾವಳಿಗೆ ಚಾಲನೆ ನೀಡಿ, ಮಕ್ಕಳ ಬುದ್ಧಿ ಶಕ್ತಿ ಬೆಳವಣಿಗೆಗೆ ಚೆಸ್ ಸಹಕಾರಿಯಾಗಿದೆ ಎಂದರು. ಪೋಷಕರು ತಮ್ಮ ಮಕ್ಕಳಿಗೆ ಮೊಬೈಲ್ ನೀಡದೇ ಇಂತಹ ಬುದ್ಧಿವಂತ ಕ್ರೀಡೆಗಳಲ್ಲಿ ಅಳವಡಿಸಿಕೊಳ್ಳಲು ಪ್ರೋತ್ಸಾಹಿಸಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಸಂಘದ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ,  ಮಾಂತೇಶ್ ಜಿ. ಆಡಿಟರ್, ಎ.ನಾಗರಾಜ್, ಎಸ್.ಮಲ್ಲಿಕಾರ್ಜುನ್, ಅಲ್ಲಾವಲಿ ಮೊಹಮ್ಮದ್ ಖಾನ್, ಟಿ.ಯುವರಾಜ್, ಮಂಜುಳಾ ಯುವರಾಜ್, ಪವನ್ ಕುಮಾರ್, ಮೇಘರಾಜ್, ದೀಪಾ, ಬಸವರಾಜ್, ಮಲ್ಲೇಶ್  ಮುಂತಾದವರು ಭಾಗವಹಿಸಿದ್ದರು

ಮೂರು ವಿಭಾಗಗಳಲ್ಲಿ ಪಂದ್ಯಾವಳಿ ನಡೆಸಲಾಯಿತು. ಓಪನ್ ವಿಭಾಗದಲ್ಲಿ ಹೊನ್ನಾಳಿಯ ಸಚಿನ್ ಪಿ.ಎಸ್ ಪ್ರಥಮ ಸ್ಥಾನ, ದೀಕ್ಷಾಂತ್ ಗೋಕುಲ್ ಅರೋರ ದ್ವಿತೀಯ ಸ್ಥಾನ,  ಡಾಕ್ಟರ್ ಸಮೀರ್ ಅಹ್ಮದ್  ತೃತೀಯ ಸ್ಥಾನ ಪಡೆದರು.

ಉಳಿದಂತೆ ವಿವಿಧ ಭಾಗಗಳಲ್ಲಿ ಮೊಹಮ್ಮದ್ ಆರ್ಯನ್, ಸಾನ್ವಿಕ ಎನ್‌.ಎ., ಭುವನಸಾಗರಿ, ತ್ರಿಶಾ ಬಿ.ಆರ್., ಅಮಿತ್ ಚಂದ್ರ.ಬಿ.,  ಸಾತ್ವಿಕ್ ನಾಯಕ್.ಎನ್.,  ಲಕ್ಷಿತ್ ದಯಾನಂದ್, ಅಪೇಕ್ಷ ಐ.ಡಿ.,  ದೇವದತ್ತ ಆರ್.ಕೊಟ್ಟಾಲ್.,  ವೈಭವ್.ಜಿ,  ದಿಗಂತ್.ಎಂ.ಎಸ್,  ಸ್ವಯಂ ಎಂ.ಎಸ್,  ನಿರಂಜನ್.ಎಂ.,  ಗಿರೀಶ್.ಜಿ.ಎನ್,  ಅರ್ಫತ್.ಎ,  ರಮ್ಯಾ ಕೆ.ಯು., ಸಮರ್ಥ್ ಪೂಜಾರ್ ಬಹುಮಾನಗಳನ್ನು ಪಡೆದಿದ್ದಾರೆ. ಶ್ರೀಮತಿ ಲತಿಕಾ ದಿನೇಶ್ ಕೆ.ಶೆಟ್ಟಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು.

error: Content is protected !!