ಬ್ಲಾಕ್‌ ಕಾಂಗ್ರೆಸ್‌ಗೆ ಅಂಜಿನಪ್ಪ ಅಧ್ಯಕ್ಷ: ಸಂಭ್ರಮ

ಬ್ಲಾಕ್‌ ಕಾಂಗ್ರೆಸ್‌ಗೆ ಅಂಜಿನಪ್ಪ ಅಧ್ಯಕ್ಷ: ಸಂಭ್ರಮ

ಹರಪನಹಳ್ಳಿ, ಜ.28- ಹರಪನಹಳ್ಳಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾಗಿ ಇಲ್ಲಿನ ಪುರಸಭಾ ಹಿರಿಯ ಸದಸ್ಯ ಎಂ.ವಿ.ಅಂಜಿನಪ್ಪ ಅವರು ನೇಮಕವಾಗಿದ್ದಕ್ಕೆ ಅವರ ಬೆಂಬಲಿಗರು ಪಟ್ಟಣದ ವಿವಿಧೆಡೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಮೊದಲಿಗೆ ಪಟ್ಟಣದ ಹರಿಹರ ವೃತ್ತದಲ್ಲಿ ಜಮಾವಣೆಗೊಂಡ ಕಾರ್ಯಕರ್ತರು ಸಿಹಿ ವಿತರಿಸಿ, ಪಟಾಕಿ ಸಿಡಿಸಿ, ಜೈಕಾರ ಕೂಗಿದರು.  ನಂತರ ಪ್ರವಾಸಿ ಮಂದಿರ ವೃತ್ತದಲ್ಲಿ ಸೇರಿ ಅಲ್ಲೂ ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಿದರು. 

ಈ ಸಂಭ್ರಮೋತ್ಸವದಲ್ಲಿ ಪುರಸಭಾ ಸದಸ್ಯರುಗಳಾದ ಲಾಟಿ ದಾದಾಪೀರ್‌, ಉದ್ದಾರ ಗಣೇಶ್‌, ಗೊಂಗಡಿ ನಾಗರಾಜ್‌, ಮುಖಂಡರಾದ ಚಿಕ್ಕೇರಿ ಬಸಪ್ಪ, ಸಣ್ಣ ಹಾಲಪ್ಪ, ಎಲ್‌.ಮಂಜಾನಾಯ್ಕ, ಎನ್‌.ಶಂಕರ್‌, ಉದಯಶಂಕರ್‌, ಅಗ್ರಹಾರ ಅಶೋಕ್, ಶಶಿಕುಮಾರನಾಯ್ಕ, ಅಂಡಿ ಅಂಜಿನಪ್ಪ, ಗುಡಿ ನಾಗರಾಜ್‌, ಉಪ್ಪಾರ ಹನುಮಂತಪ್ಪ, ಎಂ.ವಿ.ಕೃಷ್ಣ, ಮತ್ತೂರು ಬಸವರಾಜ, ಶಿವರಾಜ, ಪೈಲ್ವಾನ್‌ ಬಸಪ್ಪ ಮಂಜು ತಿಪ್ಪನಹಳ್ಳಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

error: Content is protected !!