ಭವಿಷ್ಯ ನಿರ್ಧರಿಸುವ ಯುವ ಪಡೆ

ಭವಿಷ್ಯ ನಿರ್ಧರಿಸುವ ಯುವ ಪಡೆ

ದಾವಣಗೆರೆ, ಜ.28- ದೇಶದ ಭವಿಷ್ಯ ನಿರ್ಧರಿಸುವ ನಿರ್ಣಾಯಕ ಸ್ಥಾನದಲ್ಲಿ ಈ ದೇಶದ ಯುವ ಮತದಾರರಿದ್ದಾರೆ. ಈ ಹಿನ್ನೆಲೆಯಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡದೇ ಇರುವವರು ಕೂಡಲೇ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿ ಮತದಾನದ ಹಕ್ಕನ್ನು ಪಡೆಯುವಂತೆ ಜಿ.ಎಂ. ಸಿದ್ಧೇಶ್ವರ ಹೇಳಿದರು.

ಜಿ.ಎಂ.ಐ.ಟಿ  ಸಭಾಂಗಣದಲ್ಲಿ ಬಿ.ಜೆ.ಪಿ ಯುವಮೋರ್ಚಾ ವತಿಯಿಂದ ನಡೆದ `ಯುವ ಮತದಾರರ ಸಮ್ಮೇಳನ’ ದಲ್ಲಿ ಅವರು ಮಾತನಾಡಿದರು.  

ಮತದಾನ ನಮ್ಮೆಲ್ಲರಿಗೂ ದೊರಕಿರುವ ಹಕ್ಕು. ಇದನ್ನು ಸರಿಯಾದ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳುವಂತೆ  ಯುವ ಮತದಾರರಿಗೆ ಕರೆ ನೀಡಿದರು.

ಯುವಕರು ಕೇವಲ ಹಕ್ಕುಗಳ ಬಗ್ಗೆ ಮಾತನಾಡಬಾರದು, ಮೂಲಭೂತ ಕರ್ತವ್ಯಗಳ ಬಗ್ಗೆ ಚಿಂತಿಸುವ  ಅನಿವಾರ್ಯತೆಯಿದೆ,   ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಯೂ ಕೂಡ ಮತದಾನದಿಂದ ದೂರ ಉಳಿಯುವುದು ಭ್ರಷ್ಟಾಚಾರ ಮಾಡಿದಂತೆ, ಕೇವಲ ಲಂಚ ಪಡೆಯುವುದು ಮಾತ್ರ ಭ್ರಷ್ಟಾಚಾರವಲ್ಲ, ಮತದಾನದಿಂದ ದೂರ ಉಳಿಯುವುದು ಕೂಡ ಭ್ರಷ್ಟಾಚಾರ ಎಂದರು.

ಕಾರ್ಯಕ್ರಮದಲ್ಲಿ   ಬಿ.ಜೆ.ಪಿ. ಜಿಲ್ಲಾಧ್ಯಕ್ಷ ಎನ್. ರಾಜಶೇಖರ್, ಯುವಮೋರ್ಚಾ ಅಧ್ಯಕ್ಷ ಶಿವಪ್ರಕಾಶ್, ಮಾಜಿ ಮೇಯರ್ ಎಸ್. ಟಿ. ವೀರೇಶ್, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಶ್ರೀನಿವಾಸ್ ದಾಸಕರಿಯಪ್ಪ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹಾಲುವರ್ತಿ ಶ್ರೀಧರ್ ಉಪಸ್ಥಿತರಿದ್ದರು.

error: Content is protected !!