ದಾವಣಗೆರೆ, ಜ.28- ನಗರದ ಜೈನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿಗಳು ಯುಕ್ತಿ ಇನ್ನೋವೇಶನ್ ಚಾಲೆಂಜ್‍ನಲ್ಲಿ ಆಯ್ಕೆಯಾದ ಇನ್ನೋವೇಟಿವ್ ಪ್ರಾಜೆಕ್ಟ್‍ಗಳನ್ನು ಐಐಸಿ ರಿಜನಲ್ ಮೀಟ್ 2024 ರಲ್ಲಿ ಪ್ರದರ್ಶಿಸಿದರು.
ಕಳೆದ ದಿನಾಂಕ 10ರಂದು ಈ ಕಾರ್ಯಕ್ರಮವನ್ನು ಹುಬ್ಬಳ್ಳಿ ಕೆಎಲ್‍ಇ ಯುನಿವರ್ಸಿಟಿ ಆಯೋಜಿಸಿತ್ತು. ಕಾರ್ಯಕ್ರಮಕ್ಕೆ ಎಐಸಿಟಿಇ ಸಲಹೆಗಾರರಾದ ಡಾ. ಮಮತಾರಾಣಿ ಅಗರ್‌ವಾಲ್, ಕೇಂದ್ರ ಶಿಕ್ಷಣ ಸಚಿವಾಲಯದ ಅಸಿಸ್ಟೆಂಟ್ ಇನ್ನೋವೇಶನ್ ಡೈರೆಕ್ಟರ್ ದೀಪನ್ ಸಾಹು ಅತಿಥಿಗಳಾಗಿ ಆಗಮಿಸಿದ್ದರು.
ಆಯ್ಕೆಯಾದ ಪ್ರಾಜೆಕ್ಟ್‍ಗಳಾದ ಸ್ಮಾರ್ಟ್ ಮೂವಬಲ್ ರೋಡ್ ಡಿವೈಡರ್, ಸೋಲರ್ ಸಿಸ್ಟಮ್ ಬಳಸಿ ಸೀಡ್ಸ್ ಡ್ರೈಯರ್ ಮತ್ತು ಐಒಟಿ ಬಳಸಿ ಇಂಟಲಿಜೆಂಟ್ ಆಟೋಮೇಷನ್ ಗಳನ್ನು ಸ್ಪರ್ಧೆಯಲ್ಲಿ ಪ್ರದರ್ಶಿಸಲಾಯಿತು. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಜೈನ್ ಕಾಲೇಜ್ ಪ್ರಾಂಶುಪಾಲ ಡಾ. ಗಣೇಶ್ ಡಿ. ಬಿ, ಸಲಹೆಗಾರ ಡಾ. ಮಂಜಪ್ಪ ಸಾರಥಿ ಹಾಗು ಎಲ್ಲಾ ಬೋಧಕ-ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.