ಎ.ಆರ್.ಜಿ. ಕಾಲೇಜಿನಲ್ಲಿ ಯುವಜನೋತ್ಸವ

ಎ.ಆರ್.ಜಿ. ಕಾಲೇಜಿನಲ್ಲಿ ಯುವಜನೋತ್ಸವ

ದಾವಣಗೆರೆ, ಜ.28- ವಿದ್ಯಾರ್ಥಿಗಳಲ್ಲಿನ ಪ್ರತಿಭೆಗಳನ್ನು  ಗುರುತಿಸಲು ಪಠ್ಯೇತರ ಚಟುವಟಿಗಳು ಅವಶ್ಯಕ. ಕಲಿಕೆಯ ಜೊತೆಗೆ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಲಿಯುವುದು ಬಹುಮುಖ್ಯ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕೂಟದ ಅಧ್ಯಕ್ಷ  ಡಾ. ರಮೇಶ್ ಕುಮಾರ ಪಾಟೀಲ್ ಹೇಳಿದರು.

ದಾವಣಗೆರೆ ವಿಶ್ವವಿದ್ಯಾನಿಲಯವು ಎ.ಆರ್.ಜಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ  ಜಿಲ್ಲಾ ಅಂತರ್ ವಲಯ ಸಾಂಸ್ಕೃತಿಕ ಸ್ಪರ್ಧೆ ಶಿವಗಂಗೋತ್ರಿ ಯುವಜನೋತ್ಸವ 2023-24 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಡಾ. ಅಶೋಕ್ ಕುಮಾರ ವಿ. ಪಾಳೇದ್ ಅವರು ವಿದ್ಯಾರ್ಥಿಗಳಲ್ಲಿ ತುಂಬಾ ಪ್ರತಿಭೆಗಳಿದ್ದು, ಅವುಗಳನ್ನು ಗುರುತಿಸುವುದು ಅತ್ಯವಶ್ಯಕ.  ಬೌದ್ಧಿಕಶಕ್ತಿಯನ್ನು ವೃದ್ಧಿಸಲು ಸಾಂಸ್ಕೃತಿಕ ಕಾರ್ಯಕ್ರಮಗಳು ಬೇಕಾಗಿವೆ ಎಂದು ಹೇಳಿದರು. 

ಸಮಾರಂಭದಲ್ಲಿ ಪ್ರಾಂಶುಪಾಲರಾದ ಡಾ. ಜಿ. ಬಿ.ಬೋರಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂ ಡಿದ್ದರು. ಬೊಮ್ಮಣ್ಣ,  ಪ್ರೊ. ಅನಿತಾಕುಮಾರಿ, ಪ್ರೊ. ರಶ್ಮಿ,  ಡಾ. ಹೆಚ್. ಆರ್.  ತಿಪ್ಪೇಸ್ವಾಮಿ, ಡಾ. ಚಮನ್ ಸಾಬ್,  ಕರಿಬಸಪ್ಪ,  ಅಣ್ಣೇಶ್,  ಮಂಜುನಾಥ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

error: Content is protected !!