ಹರಪನಹಳ್ಳಿ : ಎನ್‌ಎಸ್‌ಎಸ್‌ ಶಿಬಿರದ ಸಮಾರೋಪ

ಹರಪನಹಳ್ಳಿ : ಎನ್‌ಎಸ್‌ಎಸ್‌ ಶಿಬಿರದ ಸಮಾರೋಪ

ಹರಪನಹಳ್ಳಿ, ಜ.28- ದೇಶದ ಪ್ರಗತಿಯಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಪಾತ್ರ ಬಹುಮುಖ್ಯವಾಗಿದೆ ಎಂದು ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ ಕಲ್ಮಠ ಹೇಳಿದರು. 

ತಾಲ್ಲೂಕಿನ ಚಿರಸ್ಥಹಳ್ಳಿ ಗ್ರಾಮದಲ್ಲಿ ಎಡಿಬಿ ಪ್ರಥಮ ದರ್ಜೆ ಕಾಲೇಜಿನವರು ಆಯೋಜಿಸಿದ್ದ ಎನ್‌. ಎಸ್‌. ಎಸ್‌. ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. 

ಎನ್.ಎಸ್.ಎಸ್. ಸ್ವಾತಂತ್ರ್ಯ ಪೂರ್ವದಲ್ಲಿ ಆರಂಭವಾದ ಸಂಸ್ಥೆ, ಇಂದು ಹೆಮ್ಮರವಾಗಿ ಬೆಳೆದಿದೆ. ನಾಲ್ಕು ಮಿಲಿಯನ್ ಶಿಬಿರಾರ್ಥಿಗಳನ್ನು ಹೊಂದಿದ್ದು, ದೇಶ ಸೇವೆಯಲ್ಲಿ ತೊಡಗಿ ದೇಶ ಭಕ್ತಿ ಬೆಳೆಸುತ್ತಿದೆ, ಶಿಬಿರಾರ್ಥಿಗಳು ರಾಷ್ಟ್ರೀಯ ಪರಂಪರೆಯ ಇತಿಹಾಸ ತಿಳಿದುಕೊಳ್ಳುವ ಮೂಲಕ ಸತ್ ಪ್ರಜೆಗಳಾಗಿ ಶಿಸ್ತು, ಸರಳತೆ, ಸಂಯಮ ಬೆಳೆಸಿಕೊಳ್ಳಬೇಕು ಎಂದರು. 

ಸಮಾರಂಭದಲ್ಲಿ ಗ್ರಾ. ಪಂ ಅಧ್ಯಕ್ಷ ಪರಶುರಾಮ್‌, ಪ್ರಾಚಾರ್ಯ ಬಸವರಾಜ್‌, ಮಲ್ಲಿಕಾರ್ಜುನ ಕಲ್ಮಠ್, ಪಿಡಿಒ ಪ್ರಭುನಾಯ್ಕ್, ಶ್ರೀನಿವಾಸ, ಚನ್ನಮಲ್ಲಿಕಾರ್ಜುನ ಸ್ವಾಮಿ, ಲಿಂಬ್ಯಾನಾಯ್ಕ್, ಚಂದ್ರಪ್ಪ, ಲತಾ ಚಂದ್ರಪ್ಪ, ರೇಣುಕಪ್ಪ,  ಸಿದ್ಧಲಿಂಗಮೂರ್ತಿ, ಜಿ. ಬಿ. ನಾಗನಗೌಡ, ತಿಪ್ಪೇಸ್ವಾಮಿ, ಆನಂದ, ರಾಜಶೇಖರ್‌, ನವಾಜ್, ಚಂದ್ರಪ್ಪ, ರೇಣುಕಾ‌ ಪ್ರಸಾದ ಕಲ್ಮಠ್  ಹಾಗೂ ಶಿಬಿರಾರ್ಥಿಗಳು ಹಾಜರಿದ್ದರು.

error: Content is protected !!