ರಾಜ್ಯಮಟ್ಟದ ಶೋಷಿತ ಹಿಂದುಳಿದ ವರ್ಗಗಳ ಸಮಾವೇಶಕ್ಕೆ ಕರೆ

ರಾಜ್ಯಮಟ್ಟದ ಶೋಷಿತ ಹಿಂದುಳಿದ ವರ್ಗಗಳ ಸಮಾವೇಶಕ್ಕೆ ಕರೆ

ಜಗಳೂರು, ಜ.24- ಚಿತ್ರದುರ್ಗದಲ್ಲಿ ಜನವರಿ 28ರಂದು  ರಾಜ್ಯಮಟ್ಟದ  ಶೋಷಿತ ಹಿಂದುಳಿದ ವರ್ಗಗಳ ಸಮಾವೇಶ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜ್ಯ, ರಾಷ್ಟ್ರನಾಯಕರು ಭಾಗವಹಿಸುತ್ತಿದ್ದಾರೆ.ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಶಾಸಕ ಬಿ. ದೇವೇಂದ್ರಪ್ಪ ಮನವಿ ಮಾಡಿದರು.

ಪತ್ರಕರ್ತರ ಭವನದಲ್ಲಿ ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂತರಾಜ್ ವರದಿ ಜಾರಿಯಾಗಬೇಕು. ಹಿಂದುಳಿದ ವರ್ಗಗಳಿಗೆ ನ್ಯಾಯಯುತವಾಗಿ ಸೌಲತ್ತುಗಳು ಸಿಗಬೇಕು. ಯಾವುದೇ ಸವಲತ್ತು ಸಿಗಬೇಕಾದರೆ  ಸಂಘಟನೆ, ಹೋರಾಟ, ಸಮಾವೇಶಗಳು  ಮುಖ್ಯವಾಗಿವೆ. ಎಸ್‌ಸಿ, ಎಸ್‌ಟಿ ಜನಸಂಖ್ಯೆ ಅತಿ ಹೆಚ್ಚಿರುವ ಜಗಳೂರು ಕ್ಷೇತ್ರದ ಜನರು ಹೆಚ್ಚಾಗಿ  ಸಮಾವೇಶದಲ್ಲಿ ಪಾಲ್ಗೊಳ್ಳಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ  ಬಸ್ಸುಗಳ ವ್ಯವಸ್ಥೆ ಮಾಡಲಾಗುತ್ತದೆ ಎಂದರು.

ಹಿಂದೆ ಮಾಡಿರುವ  ಜಾತಿ ಜನಗಣತಿ ಸಮೀಕ್ಷೆ ಸರಿಯಾಗಿ ಆಗಿಲ್ಲ. ಸರ್ಕಾರ ಇನ್ನೊಮ್ಮೆ ಜಾತಿ ಜನಗಣತಿ ಮಾಡಿ ವರದಿ
ನೀಡಬೇಕೆಂದು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ ಎಂಬ ಪತ್ರಕರ್ತರು ಕೇಳಿದ ಪ್ರಶ್ನೆಗೆ `ಸಮಬಾಳು ಸಮಪಾಲು’ ಎಲ್ಲರಿಗೂ ಕೇಳುವ ಹಕ್ಕಿದೆ. ಕಾಂತರಾಜ್ ವರದಿ ಜಾರಿಯಾದ ಮೇಲೆ ವರದಿಯಲ್ಲಿ ಏನಿದೆ ಎಂಬುದು ಗೊತ್ತಾಗುತ್ತದೆ. ಈಗಲೇ ಏನೂ ಹೇಳಲು
ಆಗುವುದಿಲ್ಲ.  ಲೋಪದೋಷಗಳು ಕಂಡು ಬಂದರೆ ಸರಿಪಡಿಸುವ ಸಾಧ್ಯತೆಯೂ ಇದೆ. ಕಾಂಗ್ರೆಸ್ ಪಕ್ಷವಾಗ ಲೀ, ಯಾವುದೇ ಪಕ್ಷವಾಗಲೀ ಸರ್ವೇ ಮಾಡಿಲ್ಲ. ಆಯೋಗ ನೀಡಿದ ವರದಿಯಾಗಿರುತ್ತದೆ ಎಂದು ಶಾಸಕರು  ಸ್ಪಷ್ಟಪಡಿಸಿದರು.

ಎಸ್‌ಟಿ ಶೆಲ್ ನ ರಾಜ್ಯಾಧ್ಯಕ್ಷ ಕೆ.ಪಿ. ಪಾಲಯ್ಯ ಮಾತನಾಡಿ, ಶಾಸಕರ ನೇತೃತ್ವದಲ್ಲಿ ಚಿತ್ರದುರ್ಗದಲ್ಲಿ 28ರಂದು ನಡೆಯುವ ಶೋಷಿತ, ಹಿಂದುಳಿದ ವರ್ಗಗಳ ಸಮಾವೇಶಕ್ಕೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿ ಯಶಸ್ವಿಗೊಳಿಸಬೇಕೆಂದು ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಕಲ್ಲೇಶ್‌ರಾಜ್‌ ಪಟೇಲ್, ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ  ಷಂಷೀರ್ ಅಹಮದ್, ರಾಜ್ಯ ಎಸ್‌ಟಿ ಶೆಲ್ ಪ್ರಧಾನ ಕಾರ್ಯದರ್ಶಿ  ಕೀರ್ತಿಕುಮಾರ್, ಜಿ.ಎಚ್. ಶಂಭುಲಿಂಗಪ್ಪ, ಓಮಣ್ಣ, ಪಲ್ಲಾಗಟ್ಟಿ ಶೇಖರಪ್ಪ, ಬಿ.ಮಹೇಶ್ವರಪ್ಪ, ಲಕ್ಷ್ಮಣ, ಡಿ.ಆರ್. ಹನುಮಂತಪ್ಪ ಸೇರಿದಂತೆ, ಯುವ ಘಟಕದ ಅಧ್ಯಕ್ಷರು, ಸಾಮಾಜಿಕ ಜಾಲತಾಣದ ಪದಾಧಿಕಾರಿಗಳು, ಇತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

error: Content is protected !!