ಶರಣರ ತತ್ವ ಅಳವಡಿಸಿಕೊಂಡಾಗ ಉತ್ಸವಕ್ಕೆ ಅರ್ಥ

ಶರಣರ ತತ್ವ ಅಳವಡಿಸಿಕೊಂಡಾಗ ಉತ್ಸವಕ್ಕೆ ಅರ್ಥ

ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಶ್ರೀ ಒಡೆಯರ ಚಿತ್ರಶೇಖರ ಸ್ವಾಮೀಜಿ ಆಶಯ

ರಾಣೇಬೆನ್ನೂರು, ಜ.24- ಶರಣರ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆದಾಗ ಮಾತ್ರ ಶರಣರ ಜಯಂತ್ಯೋತ್ಸವವನ್ನು ಆಚರಿಸಿದ್ದಕ್ಕೂ ಅರ್ಥ ಬರುತ್ತದೆ ಎಂದು ಶ್ರೀ ಒಡೆಯರ ಚಿತ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಚೌಡಯ್ಯದಾನಾಪುರ ಗ್ರಾಮದ ತುಂಗಭದ್ರಾ ನದಿಯ ತಟದಲ್ಲಿರುವ ಶರಣ  ಅಂಬಿಗರ ಚೌಡಯ್ಯನವರ ಐಕ್ಯಮಂಟಪದಲ್ಲಿ ನಡೆದ ಶ್ರೀ ಅಂಬಿಗರ ಚೌಡಯ್ಯನವರ ಜಯಂತ್ಯೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ಅಂಬಿಗರ ಚೌಡಯ್ಯನವರು ತಮ್ಮ ಕಠೋರವಾದ ವಚನಗಳ ಮೂಲಕ ಸಮಾಜದ ಅಂಕು ಡೊಂಕು ತಿದ್ದುವಲ್ಲಿ ಪ್ರಮುಖರಾದ ಮಹಾ ಶರಣ ರಾಗಿದ್ದರು, ಅಂತಹ ಶರಣ ಆದರ್ಶಗಳನ್ನು ಸರ್ವರೂ ರೂಢಿಸಿಕೊಂಡು ಸಾಗಿದಾಗ ಅಂತವರ ಜೀವನ ಸಾರ್ಥಕತೆಯಿಂದ ಕೂಡಿರುತ್ತದೆ ಎಂದರು.

ನಾಡಿನಲ್ಲಿರುವ ಎಲ್ಲ ಶರಣರು ಎಲ್ಲ ಸಮಾಜಕ್ಕೂ ಬೇಕಾದವರು. ಆದರೆ ಇಂದಿನ ಪರಿಸ್ಥಿತಿ ಕೇವಲ ಆಯಾ ಸಮಾಜಕ್ಕೆ ಮಾತ್ರ ಎಂ ಬಂತೆ ಜಯಂತಿಗಳು ಆಚರಣೆಯಾಗುತ್ತಿರುವುದು ವಿಷಾದದ ಸಂಗತಿ, ಜಾತೀಯತೆ, ಮೌಢ್ಯತೆ ಹೋಗಲಾಡಿಸಲು ಶ್ರಮಿಸಿದ ಶರಣರನ್ನು ಎಲ್ಲರೂ ಅಪ್ಪಿಕೊಂಡು ಅವರ ಆದರ್ಶ ತತ್ವಗಳನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕು ಅಂದಾಗ ಇಂತಹ ಶರಣರ ಜಯಂತಿ ಆಚರಿಸಿದ್ದಕ್ಕೂ ಸಾರ್ಥಕವಾಗುತ್ತದೆ ಎಂದರು.

ಅರ್ಚಕರಾದ ಪ್ರಶಾಂತ ಹಾಲವಾಡಿಮಠ, ಗಿರೀಶ ದೀಪಾವಳಿ, ಗ್ರಾಮದ ಮುಖಂಡರಾದ ಮಹಲಿಂಗಪ್ಪ ಭತ್ತದ, ಸಿದ್ದಪ್ಪ ನಾಗನೂರ, ಲಕ್ಷ್ಮಣ ದೀಪಾವಳಿ, ಶಂಭುಲಿಂಗಪ್ಪ ಭತ್ತದ,  ಚನ್ನವೀರಪ್ಪ ಯಲಿಗಾರ,  ವೀರಭದ್ರಪ್ಪ ದೀಪಾವಳಿ, ಧರ್ಮಪ್ಪ ಕುಂಚೂರ, ಪಕ್ಕಿರೇಶ, ವೀರಣ್ಣ ಗಂಗಮ್ಮನವರ, ನಾಗರಾಜಪ್ಪ ದೀಪಾವಳಿ, ಗಂಗಾಧರಯ್ಯ ಪೂಜಾರ, ಜಯಪ್ಪ ಹೊನಕುದರಿ, ಪ್ರವೀಣ ಚಕ್ರಸಾಲಿ,ಶಿವಪುತ್ರಪ್ಪ ಹಾವೇರಿ, ಹನುಮಂತಪ್ಪ ದಿವಟರ, ರುದ್ರಪ್ಪ ಮಾಳಗಿ, ಸಚಿನ್ ದೀಪಾವಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

error: Content is protected !!