ದಾವಣಗೆರೆ, ಜ. 23- ನಗರದ ಪಿ.ಜೆ.ಬಡಾವಣೆ ಬಣಜಾರ ಎಜುಕೇಶನ್ ಟ್ರಸ್ಟ್ ನ ಆವರಣದಲ್ಲಿ ಅಯೋಧ್ಯೆಯಲ್ಲಿ ನೂತನ ರಾಮ ಮಂದಿರದಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆ ಸಂದರ್ಭದಲ್ಲಿ ಶ್ರೀರಾಮನಿಗೆ ಪೂಜೆ ಸಲ್ಲಿಸಿ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಯಿತು.
ಈ ಸಂದರ್ಭದಲ್ಲಿ ಅರ್ಚಕರು ಹಾಗೂ ಪಾಲ್ ಸೈಂಟಿಫಿಕ್ ನ ಮಾಲೀಕ ಪ್ರೊ.ಚನ್ನಪ್ಪ ಪಲ್ಲಾಗಟ್ಟೆ, ಇಂಜನಿಯರ್ ಗಂಗಾಧರ್, ಮಂಜುನಾಥ ಡೆಕೋರೇಷನ್‌ನ ಮಂಜುನಾಥ್, ಬಣಜಾರ ವಿದ್ಯಾರ್ಥಿ ನಿಲಯದ ರವಿ ಹಾಗೂ ಇತರರು ಹಾಜರಿದ್ದರು.