ಹೊನ್ನಾಳಿ, ಜ. 23 – ರಾಜ್ಯ ಸರ್ಕಾರಿ ನೌಕರರ ಸಂಘದ ಎನ್‍ಪಿಎಸ್ ತಾಲ್ಲೂಕು ವತಿಯಿಂದ ಒಪಿಎಸ್ ಹಕ್ಕೊತ್ತಾಯ ಚಿಂತನ ಸಭೆಯನ್ನು ಪ್ರವಾಸಿ ಮಂದಿರದಲ್ಲಿ ನಡೆಸಿ, ನಂತರ ಶಾಸಕರ ನಿವಾಸಕ್ಕೆ ತೆರಳಿ ಮನವಿ ಸಲ್ಲಿಸಲಾಯಿತು.
ಎನ್‍ಪಿಎಸ್ ಸಂಘಟನಾ ಅಧ್ಯಕ್ಷ ಕೆ. ಪ್ರಕಾಶ್ ನಾಯಕ್ ಮಾತನಾಡಿ ಜನವರಿ 6 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯೋಜನೆ ರದ್ಧತಿ ವಿಷಯವನ್ನು ಸಚಿವ ಸಂಪುಟದ ಸಹೋದ್ಯೋಗಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿರುವ ವಿಷಯವನ್ನು ಸಂಘದ ಸದಸ್ಯರಿಗೆ ತಿಳಿಸಲು ಇಂದು ಸಭೆ ನಡೆಸಲಾಗಿದೆ ಎಂದರು
ಈ ಸಂದರ್ಭದಲ್ಲಿ ಸಂಘದ ಗೌರವ ಅಧ್ಯಕ್ಷ ಕೆ ಅರುಣ್, ಕಾರ್ಯದರ್ಶಿ ಮಲ್ಲಿಕಾರ್ಜುನ್ ಬಡಿಗೇರ್, ಉಪಾಧ್ಯಕ್ಷ ರುದ್ರೇಶ್, ಎನ್‌ಜಿಒ ಅಧ್ಯಕ್ಷ ಪಾಟೀಲ್ ನ್ಯಾಮತಿ, ಅಧ್ಯಕ್ಷ ಲಿಂಗಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷೆ ನೀಲಮ್ಮ, ಕಾರ್ಯದರ್ಶಿ ಗೀತಾ, ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ್, ಮಾಧ್ಯಮ ಸಲಹೆಗಾರ ಪ್ರಶಾಂತ್, ಎಚ್.ಸಿ ಚಂದ್ರಶೇಖರ್ ಸಾವಿತ್ರಿಬಾಯಿ ಪುಲೆ ಅಧ್ಯಕ್ಷೆ ಶಹಜಾನ್ , ಕಾರ್ಯದರ್ಶಿ ರಂಜಿತ್, ರಾಮಪ್ಪ ಬಿ.ಎನ್. ಮಂಜುನಾಥ್, ನಾಗೇಶ್, ನಾಗರತ್ನ ಮತ್ತು ಇತರರು ಉಪಸ್ಥಿತರಿದ್ದರು.