ದಾವಣಗೆರೆ, ಜ. 23- ನಗರದ ಸದ್ಯೋಜಾತ ಮಠದ ಆವರಣದಲ್ಲಿ ಎಂ ಐ ವಿಂಗ್ಸ್ ಪ್ರಿ ಸ್ಕೂಲ್ನ ಶಾಲಾ ಕ್ರೀಡಾಕೂಟವನ್ನು ವಿಶೇಷವಾಗಿ ಆಚರಿಸಲಾಯಿತು.
ಖೋ ಖೋ ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ದಾವಣಗೆರೆಯನ್ನು 15 ಹೆಚ್ಚು ಬಾರಿ ಪ್ರತಿನಿಧಿಸಿರುವ ಅರ್ಜುನ್ ಅತಿಥಿಯಾಗಿ ಉಪಸ್ಥಿತರಿದ್ದರು.
ಕ್ರೀಡಾ ಜ್ಯೋತಿಯನ್ನು ಮಾರ್ಚ್ ಫಾಸ್ಟ್ ಮುಖಾಂತರ ಪುಟಾಣಿಗಳು ತಂದು ಅತಿಥಿಗಳಿಗೆ ಕೊಟ್ಟಿದ್ದು ವಿಶೇಷವಾಗಿತ್ತು. ಶಾಲೆಯ ಸಂಸ್ಥಾಪಕರಾದ ದೀಪಾರಾವ್ ಹಾಗೂ ನಿರ್ದೇಶಕ ಬಿ.ಟಿ. ವೆಂಕಟೇಶ್, ಶಿಕ್ಷಕಿಯರಾದ ಮೀನಾ ಕುಮಾರಿ, ಅಮ್ರೀನ್ ಉಪಸ್ಥಿತರಿದ್ದರು.