ದಾವಣಗೆರೆ ಜ. 23 – ನಗರದ ಜಯದೇವ ವೃತ್ತದಲ್ಲಿ ಹಿಂದೂ ಜಾಗರಣ ವೇದಿಕೆ ಹಾಗೂ ಜಿಲ್ಲಾ ಯೋಗ ಒಕ್ಕೂಟದಿಂದ ರಕ್ತದಾನ ಶಿಬಿರ ನಡೆಯಿತು. 57 ಜನರು ರಕ್ತದಾನ ಮಾಡಿದ್ದು, ಅವರಿಗೆಲ್ಲ ರಾಮಮಂದಿರದ ಚಿತ್ರವಿರುವ ಬೆಳ್ಳಿ ಫಲಕವನ್ನು ಉಡುಗೊರೆಯಾಗಿ ನೀಡಲಾಯಿತು.
ಯೋಗ ಒಕ್ಕೂಟದ ಅಧ್ಯಕ್ಷ ವಾಸುದೇವ ರಾಯ್ಕರ್ 49ನೇ ಬಾರಿ ರಕ್ತದಾನ ಮಾಡಿದರು. ಪಾಲಿಕೆ ಸದಸ್ಯ ಎಸ್.ಟಿ.ವೀರೇಶ್, ನಗರಸಭೆ ಮಾಜಿ ಅಧ್ಯಕ್ಷ ಕೆ.ಜಿ.ಶಿವಕುಮಾರ್, ಯೋಗ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸಿದ್ದೇಶ್, ಪರಶುರಾಮ್, ರಾಜು ಬದ್ದಿ ಭಾಗವಹಿಸಿದ್ದರು.