ಕನ್ನಡ ಸಂರಕ್ಷಣೆಗೆ ಶ್ರಮಿಸುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತು

ಕನ್ನಡ ಸಂರಕ್ಷಣೆಗೆ ಶ್ರಮಿಸುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತು

ಹರಪನಹಳ್ಳಿಯ ಎಡಿಬಿ ಪ್ರಥಮ ದರ್ಜೆ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಕೋರಿ ವಿರುಪಾಕ್ಷಪ್ಪ ಶ್ಲ್ಯಾಘನೆ

ಹರಪನಹಳ್ಳಿ, ಜ.19- ಕನ್ನಡ ನಾಡು, ನುಡಿಯ ಸಂರಕ್ಷಣೆ ಮತ್ತು ಕನ್ನಡ ಭಾಷೆ ಗಾಗಿ ಶ್ರಮಿಸಲು ಕಟ್ಟಲಾಗಿರುವ ಸಂಸ್ಥೆಯೇ ಕನ್ನಡ ಸಾಹಿತ್ಯ ಪರಿಷತ್ತು ಎಂದು  ಎಡಿಬಿ ಪ್ರಥಮ ದರ್ಜೆ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಕೋರಿ ವಿರುಪಾಕ್ಷಪ್ಪ ಹೇಳಿದರು.

ತಾಲ್ಲೂಕಿನ ಚಿರಸ್ತಹಳ್ಳಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಇಂದು ಹಮ್ಮಿಕೊಂಡಿದ್ದ ಯರಬಾಸಿ ಗಂಗಮ್ಮ ಸ್ಮರಣಾರ್ಥ, ಮೈದೂರು ಸಾವಿತ್ರಮ್ಮ ದತ್ತಿ.ಕಂಚಿಕೇರಿ ಬಿದರಿ ಸಿದ್ದಮ್ಮ ವೀರಮ್ಮ ಸ್ಮಾರಕ, ದಿ. ಮುದೇನೂರು ವಿರೂಪಾಕ್ಷಪ್ಪ  ಎನ್. ಸುಮಂಗಲಮ್ಮ ಶಿವರುದ್ರಪ್ಪ ದತ್ತಿ ಕಾರ್ಯಕ್ರಮ ಉದ್ಘಾಟಿಸಿ  ಅವರು ಮಾತನಾಡಿದರು.

ಕನ್ನಡ ಸಾಹಿತ್ಯವನ್ನು ನಾಡಿನ ಮೂಲೆ ಮೂಲೆಗಳಲ್ಲಿ ಹಬ್ಬಿಸಲು  ಇಂತಹ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಲಾಗು ತ್ತಿದ್ದು, ಕನ್ನ ಡಿಗರ ಪ್ರಾತಿನಿಧಿಕ ಸಂಸ್ಥೆ ಹಾಗೂ   ಕನ್ನಡ ಪರ ಸಂಸ್ಥೆಗಳಿಗೆ ಮಾತೃಸಂಸ್ಥೆಯಾಗಿ ಪ್ರಾರಂ ಭದಿಂದಲೂ ಕನ್ನಡ-ಕನ್ನಡಿಗ-ಕರ್ನಾಟಕದ ಸೇವೆಗೆ ಕಂಕಣ ಬದ್ಧವಾಗಿದೆ ಎಂದರು.

ಡಾ. ತಿಪ್ಪೇಸ್ವಾಮಿ  ಜನಪದ ಸಾಹಿತ್ಯ ಮತ್ತು ಕಲೆ ಹಾಗೂ ಸಾವಯವ ಕೃಷಿ ಅಧುನಿಕ ಬೀಜೋತ್ಪಾದನೆ ಕುರಿತು ಉಪನ್ಯಾಸ ನೀಡಿ ಜನಪದ ಸಾಹಿತ್ಯ  ಆಕಾಶದಷ್ಟು ವಿಶಾಲ, ಸಾಗರದಷ್ಟು ಆಳ. ಅದರಲ್ಲಿ ಹಲವು ಪ್ರಕಾರಗಳಿವೆ-ಗಾದೆ, ಒಗಟು, ಕಥೆ, ಗೀತೆ,  ಪ್ರಮುಖವಾಗಿವೆ. ಇಡೀ ಜಗತ್ತಿನ ಸಾಹಿತ್ಯದ ಮೂಲವನ್ನೆಲ್ಲ ಜನಪದ ಸಾಹಿತ್ಯದಲ್ಲಿ ಕಾಣಬಹುದು ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಅಧ್ಯಕ್ಷ ಕೆ. ಉಚ್ಚೆಂಗೆಪ್ಪ  ಸಮಾರಂಭದ ಅಧ್ಯಕ್ಷತೆ  ವಹಿಸಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ನಾಡಿನ ಏಕೀಕರಣದ ಹೋರಾಟಗಾರರೂ ಸಾಹಿತಿಗಳೂ ವಿದ್ವಾಂಸರೂ ಮೈಸೂರಿನ ಆಡಳಿತ ಗಾರರೂ, ಅಧ್ಯಾಪಕರೂ, ಸಾರ್ವಜನಿಕ ಗಣ್ಯರು ಹೀಗೆ ಹಲವಾರು ಗಣ್ಯ ವ್ಯಕ್ತಿಗಳ ನಾಡು, ನುಡಿ ಸೇವಕರ ಒಂದು ಗುಂಪಿನ ಜನರ ಸಂಯುಕ್ತ ಶ್ರಮ, ತ್ಯಾಗಗಳ ಫಲವಾಗಿ ರೂಪುಗೊಂಡಿತು ಎಂದರು.

ಈ ಸಂಧರ್ಭದಲ್ಲಿ ಎಡಿಬಿ ಕಾಲೇಜು ಪ್ರಾಚಾರ್ಯ ಡಾ. ಸಿದ್ದಲಿಂಗಮೂರ್ತಿ.  ಟಿಎಪಿಸಿ ಎಂ.ಎಸ್ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಕಲ್ಮಠ. ಆರುಂಡಿ ನಾಗರಾಜ,   ಜಿ. ಮಹಾದೇವಪ್ಪ, ಕಾಲೇಜು ಆಡಳಿತ ಮಂಡಳಿ ಸದಸ್ಯ ಬಿ. ಮಂಜುನಾಥ, ಪಿ. ಜಿ. ದೊಡ್ಡಬಸಪ್ಪ, ಡಾ. ಕುಮಾರ,   ಎಸ್. ಆನಂದ, ನವಾಜ್ ಬಾಷಾ ಸಿ. ಡಾ. ಗೋವರ್ಧನ, ಕೆ. ಆನಂದ, ವೀರೇಶ ಗಡ್ಡಿ,  ಲತಾ ಬಣಕಾರ ಚಂದ್ರಪ್ಪ,   ಕೆ. ಎಂ. ಚನ್ನಮಲ್ಲಿಕಾರ್ಜುನಯ್ಯ, ಡಾ. ಎ. ಎಂ. ರಾಜಶೇಖರಯ್ಯ ಇದ್ದರು.

error: Content is protected !!