ಸುವರ್ಣ ಕರ್ನಾಟಕ ವೇದಿಕೆಯಿಂದ ನೂತನ ಧ್ವಜಕಂಬ, ರಾಜ್ಯೋತ್ಸವ ಆಚರಣೆ

ಸುವರ್ಣ ಕರ್ನಾಟಕ ವೇದಿಕೆಯಿಂದ ನೂತನ ಧ್ವಜಕಂಬ, ರಾಜ್ಯೋತ್ಸವ ಆಚರಣೆ

ದಾವಣಗೆರೆ, ಜ. 19- ನಗರದ ಕಲ್ಪತರು ಮಿನಿ ಸಮುದಾಯ ಭವನದ ಹತ್ತಿರ ನಿಟುವಳ್ಳಿ ರಸ್ತೆ ಸುವರ್ಣ ಕರ್ನಾಟಕ ವೇದಿಕೆಯಿಂದ ಭೈರಪ್ಪನವರ ಸ್ಮರಣಾರ್ಥ ನೂತನ ಧ್ವಜಸ್ತಂಬ ಹಾಗೂ 64ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.

ಆವರಗೊಳ್ಳದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮಿಗಳು ನೂತನ ಸ್ತಂಭವನ್ನು ಧ್ವಜಾರೋಹಣ ನರೆವೇರಿಸಿ ಮಾತನಾಡಿ, ದಿ. ಭೈರಪ್ಪನವರು ನಗರಸಭಾ ಸದಸ್ಯರು ಹಾಗೂ ಅಧ್ಯಕ್ಷರಾಗಿ ಸಾರ್ವಜನಿಕ ಸೇವೆಯನ್ನು ಸಲ್ಲಿಸಿದ್ದಾರೆ ಎಂದು ಸ್ಮರಸಿದರು. ನೂತನ ಧ್ವಜಸ್ತಂಭದಿಂದ ಈ ಭಾಗದಲ್ಲಿ ಕನ್ನಡ ಬೆಳೆಸಲು ಅನುಕೂಲಕರವಾಗುತ್ತದೆ ಎಂದು ಹೇಳಿದರು. 

ನಿಜವಾದ ನಮ್ಮ ಕನ್ನಡ ಕುಲದೇವತೆ ಭುವನೇಶ್ವರಿ ಅನುಗ್ರಹ ನಮ್ಮ ಕನ್ನಡ ನಾಡು, ನುಡಿಗಾಗಿ ಎಲ್ಲಾ ಕನ್ನಡಿ ಗರ ಹೃದಯ ಮಿಡಿಯು ತ್ತಿದೆ ಹಾಗಾಗಿ ಈ ನಾಡಿನ ನೆಲ ಜಲ ಭಾಷೆಗಾಗಿ ಉಳುವಿಗಾಗಿ ನೀವೆಲ್ಲಾ ಹೋರಾಟ ಮಾಡಬೇ ಕಿದೆ. ಎಲ್ಲಾ ಕವಿ ಪ್ರಮು ಖರು ಕೂಡ ತಮ್ಮ ಕನ್ನಡ ನಾಡು ನುಡಿಗಾಗಿ ಹೃದಯ ಕನ್ನಡಕ್ಕಾಗಿ ಜೀವ ಮಿಡಿಯುತ್ತಿದ್ದು ಜೀವನ ಪರ್ಯಂತ ಜೀವನ ಮಿಡಿತವನ್ನು ಕನ್ನಡ ನಾಡಿನ ಎಲ್ಲಾ ಜೀವಂತ ಸಾರ್ಥಕತೆಗೆ ಫಲವನ್ನು ಕೊಟ್ಟಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಸಂತೋಷ್ ಕುಮಾರ್, ರಾಜೇಶ್,
ಬಿ. ಶ್ರೀನಿವಾಸ್, ಹೋಟೆಲ್ ಶಾಂತಕುಮಾರ್, ದೊಡ್ಮನಿ ಸುರೇಶ್, ಮಂಜುನಾಥ್ ರಾಜು, ರುದ್ರೇಶ್, ನಮ್ಮ ಜೈ ಕರುನಾಡು ವೇದಿಕೆಯ ರಾಜ್ಯಾಧ್ಯಕ್ಷ ಮಂಜುನಾಥ್ ಗೌಡ, ಶಿವಣ್ಣ ಸುಂಕಾಪುರ್, ರುದ್ರಪ್ಪ  ಮತ್ತು ಇತರರು ಭಾಗವಹಿಸಿದ್ದರು.

error: Content is protected !!