ಮಲೇಬೆನ್ನೂರು, ಜ. 18- ಕಡರನಾಯಕನಹಳ್ಳಿ ಗ್ರಾಮದಲ್ಲಿ ಮುಸ್ಲಿಂ ಮಹಿಳೆಯರಿಗೂ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಉದ್ಘಾಟನೆಯ ಆಮಂತ್ರಣ ಪತ್ರಿಕೆ ಮತ್ತು ಮಂತ್ರಾಕ್ಷತೆಯ ಜೊತೆಗೆ ಅರಿಶಿನ, ಕುಂಕುಮ, ಬಳೆಗಳನ್ನು ನೀಡಲಾಯಿತು. ಗ್ರಾ.ಪಂ ಅಧ್ಯಕ್ಷ ಜಿ. ಮಂಜುನಾಥ್, ಗುರುರಾಜ್ ಆಚಾರ್, ಗೋಪಾಲ್, ಅಶೋಕ್, ಪವನ್ ಕುಮಾರ್, ಕಿರಣ್, ಫೋಟೋ ಮಾರುತಿ ಹಾಗೂ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಮತ್ತು ಸ್ವಯಂ ಸೇವಕರು ಕರಪತ್ರ ಹಾಗೂ ಮಂತ್ರಾಕ್ಷತೆ ವಿತರಣೆಯಲ್ಲಿ ಭಾಗವಹಿಸಿದ್ದರು.
ಕೆ.ಎನ್.ಹಳ್ಳಿಯಲ್ಲಿ ಅರಿಶಿನ, ಕುಂಕುಮ, ಬಳೆ, ಮಂತ್ರಾಕ್ಷತೆ ವಿತರಣೆ
