ಹಳೆಯ ಪಿಂಚಣಿ ಮರು ಜಾರಿ ಮಾಡಲು ಆಗ್ರಹ

ಹಳೆಯ ಪಿಂಚಣಿ ಮರು ಜಾರಿ ಮಾಡಲು ಆಗ್ರಹ

ಹರಪನಹಳ್ಳಿಯಲ್ಲಿ ಸರ್ಕಾರಿ ಎನ್‌ಪಿಎಸ್ ನೌಕರರಿಂದ ಪ್ರತಿಭಟನೆ 

ಹರಪನಹಳ್ಳಿ, ಜ.17- ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ರಾಜ್ಯ ಘಟಕ ಬೆಂಗಳೂರು ಅವರ ನಿರ್ದೇಶನದಂತೆ ಹೊಸ ಪಿಂಚಣಿ ರದ್ದುಪಡಿಸಿ, ಹಳೆಯ ಪಿಂಚಣಿ ಮರು ಜಾರಿಗೆ ತರಬೇಕೆಂದು ಸರ್ಕಾರದ ಮೇಲೆ ಒತ್ತಡ ತರಲು ತಾಲ್ಲೂಕು ಎನ್‌ಪಿಎಸ್ ನೌಕರರ ಸಂಘದಿಂದ  ಶಾಸಕರಾದ ಎಂ.ಪಿ.ಲತಾ ಮಲ್ಲಿಕಾರ್ಜುನ್ ಅವರಿಗೆ ಮನವಿ ಸಲ್ಲಿಸಲಾಯಿತು. 

ಸುಮಾರು 35ಕ್ಕೂ ಹೆಚ್ಚು ಇಲಾಖೆಗಳ 200ಕ್ಕೂ ಹೆಚ್ಚು ನೌಕರರು ಸೇರಿ ಸಲ್ಲಿಸಿದ ಮನವಿಗೆ ಸ್ಪಂದಿಸಿದ ಶಾಸಕರು, ತಕ್ಷಣವೇ ವಿಜಯನಗರ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಇ.ಜಡ್.ಜಮೀರ್ ಅಹ್ಮದ್ ಅವರಿಗೆ ಫೋನ್ ಕರೆ ಮಾಡಿ, ನಮ್ಮ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಯಲ್ಲಿ ಸೇರಿಸಿದ 2006ರ ನಂತರದ ಸೇವೆಗೆ ಸೇರಿದ ಸರ್ಕಾರಿ ಅನುದಾನಿತ ಹಾಗೂ ನಿಗಮ, ಮಂಡಳಿ ನೌಕರರಿಗೆ ತಕ್ಷಣವೇ ಹಳೇಯ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ಮಾಡಲು ಸಚಿವ ಸಂಪುಟದಲ್ಲಿ ನಿರ್ಧಾರ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದರು.

ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ಆರನೇ ಗ್ಯಾರಂಟಿಯಾಗಿ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತರಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಇಡೀ ಸಭೆಗೆ ಭರವಸೆ ನೀಡಿದರು 

ಈ ಸಂದರ್ಭದಲ್ಲಿ  ಎನ್‌ಪಿಎಸ್ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಪಿ. ಅಂಜಿನಪ್ಪ ಮತ್ತು ಪ್ರಧಾನ ಕಾರ್ಯದರ್ಶಿಗಳಾದ ಸೊಪ್ಪಿನ ಹನುಮಂತಪ್ಪ ಮಾತನಾಡಿ, ಸಂಘದ ಒಂದೇ ಒಂದು ಬೇಡಿಕೆಯಾದ ಹಳೇಯ ಪಿಂಚಣಿಯನ್ನು ಜಾರಿಗೊಳಿಸಲು ಒತ್ತಾಯಿಸಿದರು. 

ತಾಲ್ಲೂಕಿನ ಸಂಘಟನೆಯ ಬೆನ್ನೆಲುಬು ವಿಜಯನಗರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಸಂಗಪ್ಪನವರ್, ರಾಜ್ಯ ಉಪಾಧ್ಯಕ್ಷರಾದ ಪದ್ಮಲತಾ, ನೌಕರರ ಸಂಘದ ಅಧ್ಯಕ್ಷ ಎಸ್.ರಾಮಪ್ಪ, ಶಿಕ್ಷಕರ ಸಂಘದ ಅಧ್ಯಕ್ಷ ಬಿ.ರಾಜಶೇಖರ್, ಕಾರ್ಯದರ್ಶಿ ನಟರಾಜ್ ಬಿ.ದೇವೇಂದ್ರಗೌಡ್ರು, ಮಂಜುನಾಥ್, ದಯಾನಂದ್, ರಮೇಶ್, ಪದ್ಮರಾಜ್ ಜೈನ್, ಷರೀಫ್ ಸಾಬ್, ಉಸ್ಮಾನ್, ಚಂದ್ರಮೌಳಿ, ಎ.ಎಂ.ಗುರುಪ್ರಸಾದ್, ನೌಕರರ ಸಂಘದ ಖಜಾಂಚಿ ಚಂದ್ರಪ್ಪ, ಅಶೋಕ್ ಬುಳ್ಳನಗೌಡ, ಮುಸ್ತಫಾ, ಆಲದಹಳ್ಳಿ ಮಂಜುನಾಥ್, ಬಂದಮ್ಮ, ಕೊಟ್ರಮ್ಮ, ಅರ್ಜುಮುನ್ನೀಸಾ  ಸೇರಿದಂತೆ ಇತರರು ಉಪಸ್ಥಿತರಿದ್ದರು.

error: Content is protected !!