ದಾವಣಗೆರೆ, ಜ.16 – ನೂತನವಾಗಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರಾಜಶೇಖರ್ ನಾಗಪ್ಪ ಅವರಿಗೆ ಬಿಜೆಪಿ ಕಛೇರಿಯಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿಯವರ ಫೋಟೋ ಕೊಡುವುದರ ಮುಖಾಂತರ ಅಭಿನಂದನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್, ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಟಿ.ಜಿ. ರವಿಕುಮಾರ್, ಬಿಜೆಪಿ ಮುಖಂಡರಾದ ಎನ್.ಎಚ್. ಹಾಲೇಶ್, ಬಾತಿ ಸಿದ್ದೇಶ್, ಬಿಶ್ವಜಿತ್ ಮುಂತಾದವರು ಉಪಸ್ಥಿತರಿದ್ದರು.
January 11, 2025