ಹರಿಹರ, ಜ. 16 – ನಗರದಲ್ಲಿ ಲಾರಿ ಚಾಲಕರು ತಮ್ಮ ಹಲವಾರು ಬೇಡಿಕೆಗ ಳನ್ನು ಸರ್ಕಾರ ಆದಷ್ಟು ಬೇಗ ಈಡೇರಿ ಸುವಂತೆ ಆಗ್ರಹಿಸಿ ತಹಶಿಲ್ದಾರ್ ಬಸವರಾ ಜಯ್ಯ ನವರಿಗೆ ಮನವಿ ಅರ್ಪಿಸಿದರು.
ಈ ವೇಳೆ ಲಾರಿ ಚಾಲಕರ ಸಂಘದ ಅಧ್ಯಕ್ಷ ಯೂಸುಫ್ ಮಾತನಾಡಿ ಲಾರಿ ಚಾಲಕರು ಮಾಲೀಕರಿಗೆ ಭಾರತೀಯ ನ್ಯಾಯ ಸಂಹಿತೆ 2023ರ ಸೆಕ್ಷನ್ 106/1 ಮತ್ತು 106/2 ರಲ್ಲಿ ಈ ಹಿಂದೆ ಇದ್ದಂತ 304 ತೆಗೆದು ಆ ಕಾನೂನು ಜಾರಿಗೆ ಮಾಡಿರುತ್ತಾರೆ. ಮೋಟಾರು ಚಾಲಕರು ಮಾಲೀಕರಿಗೆ ಹೊಸದಾಗಿ ತಂದಿರುವ ಕಾನೂನು ಪ್ರಕಾರ ಅಪಘಾತದಲ್ಲಿ ಮೃತರಾದರೆ ಚಾಲಕ 5 ರಿಂದ 10 ವರ್ಷಗಳ ಸೆರೆವಾಸ ಮತ್ತು 7 ಲಕ್ಷ ದಂಡ ತೆರಬೇಕಾಗುತ್ತದೆ. ಆದರೆ ಹಳೆಯ 304 ಎ ಪ್ರಕಾರ ಮೃತ ಪಟ್ಟರೆ ಎರಡು ವರ್ಷಗಳರೆಗೆ ಮಾತ್ರ ಸೆರೆವಾಸ ಇತ್ತು. ಹಾಗಾಗಿ ಹಳೆಯ ಕಾನೂನು ಜಾರಿಗೆ ತರಬೇಕು. ಲಾರಿ ಮೇಲೆ ದೇಶದ ಶೇ. 70 ರಷ್ಟು ಚಾಲಕರ ಜೀವನ ಅವಲಂಬಿತವಾಗಿದ್ದು, ಈ ಹೊಸ ಕಾನೂನು ಜಾರಿಗೆ ತಂದು ಚಾಲಕರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಒಂದು ವೇಳೆ ಕಾನೂನು ಹಿಂಪಡೆಯದೇ ಹೋದರೆ ದಿ 17 ರಂದು ರಾಜ್ಯ ಫೆಡ ರೇಶನ್ ಆಫ್ ಕರ್ನಾಟಕ ಲಾರಿ ಮಾಲೀ ಕರ ಸಂಘದವರು ಕರೆದಿರುವ ಮುಷ್ಕರಕ್ಕೆ ನಮ್ಮ ತುಂಗಭದ್ರಾ ಲಾರಿ ಚಾಲಕರು ಮತ್ತು ಕ್ಲೀನರ್ ಶ್ರೇಯಾಭಿವೃದ್ಧಿ ಸಂಘ ಕೈ ಜೋಡಿಸಿ ಮುಷ್ಕರಕ್ಕೆ ಬೆಂಬಲವನ್ನು ನೀಡಿ ಲಾರಿಗಳ ಸಂಚಾರವನ್ನು ಸ್ಥಗಿತಗೊ ಳಿಸಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಜಂಬಯ್ಯ,ಇಮ್ರಾನ್, ಜಪಾನ್ ರಫೀಕ್ ಸಾಬ್ , ಹಿದಾಯತ್, ಸಲ್ಮಾನ್, ವಾಸು, ಪಾಂಡು, ಅಬ್ದುಲ್ ಗಫಾರ್ ಹಾಗೂ ಇತರರು ಹಾಜರಿದ್ದರು.