ಹರಿಹರದಲ್ಲಿ ಶಾಸಕ ಹರೀಶ್
ಹರಿಹರ, ಜ. 16 – ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ 7 ನೇ ವೇತನ ಆಯೋಗದ ವರದಿ ಪಡೆದು ಜಾರಿಗೊಳಿಸುವುದು. ಎನ್.ಪಿ.ಎಸ್ ಯೋಜನೆಯನ್ನು ರದ್ದುಪಡಿಸಿ ಹಳೇ ಪಿಂಚಣಿ ಯೋಜನೆ ಜಾರಿಗೊಳಿಸುವುದು ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೊಳಿಸುವುದು. ಸೇರಿದಂತೆ, ವಿವಿಧ ಬೇಡಿಕೆಗಳನ್ನು ತಕ್ಷಣದಿಂದ ಈಡೇರಿಸಲು ಒತ್ತಾಯಿಸಿ, ಸರ್ಕಾರದ ಮೇಲೆ ಒತ್ತಡ ತರುವಂತೆ ಕೋರಿ ಹರಿಹರ ತಾಲ್ಲೂಕು ಸರ್ಕಾರಿ ನೌಕರರು ಸಂಘದ ವತಿಯಿಂದ ಶಾಸಕ ಬಿ.ಪಿ. ಹರೀಶ್ ರವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಸಂಘದ ಮನವಿಯನ್ನು ಸ್ವೀಕರಿಸಿ ಮಾತನಾಡಿದ ಶಾಸಕರು, ನೌಕರರ ಬೇಡಿಕೆಗಳು ನ್ಯಾಯಯುತವಾಗಿವೆ. ನೌಕರರ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ಶೀಘ್ರದಲ್ಲಿ ಪತ್ರ ಬರೆದು ಒತ್ತಡ ತರುತ್ತೇನೆ ಹಾಗೂ ಮುಂಬರುವ ಅಧಿವೇಶನದಲ್ಲಿ ನೌಕರರ ಬೇಡಿಕೆಗಳ ಕುರಿತು ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇನೆ. ಮುಂದಿನ ದಿನಗಳಲ್ಲಿ ನೌಕರರ ಬೇಡಿಕೆಗಳು ಈಡೇರಿರುವವರೆಗೂ ನಿಮ್ಮ ಪರವಾಗಿರುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಎ.ಕೆ. ಭೂಮೇಶ್, ಗೌರವಾಧ್ಯಕ್ಷ ಉಮ್ಮಣ್ಣ ಎಂ. ಖಜಾಂಚಿ ರೇವಣಸಿದ್ದಪ್ಪ ಅಂಗಡಿ, ಕಾರ್ಯ ದರ್ಶಿ ಎಂ. ಬಿ. ಮಂಜುನಾಥ್. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ. ಚಂದ್ರಪ್ಪ, ಕಾರ್ಯದರ್ಶಿ ಶರಣಕುಮಾರ್ ಹೆಗಡೆ, ಬಿದರಿ ಮಂಜಪ್ಪ, ಪ್ರೌಢಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಡಿ.ಎಂ. ಮಂಜುನಾಥ ಸ್ವಾಮಿ, ತಾಲ್ಲೂಕು ಅಧ್ಯಕ್ಷ ಈಶಪ್ಪ ಬೂದಿಹಾಳ, ಕಾರ್ಯದರ್ಶಿ ಧನ್ಯ ಕುಮಾರ್, ನೌಕರರ ಸಂಘದ ಉಪಾಧ್ಯಕ್ಷೆ ವೈ.ಪಿ. ಸಾಕಮ್ಮ, ಪ್ರಕಾಶ್, ಹರೀಶ್ ನೋಟಗಾರ್, ಬಿ. ಶಿವಮೂರ್ತಿ, ಶೋಭಾ ನಾರಾಯಣ ರೆಡ್ಡಿ, ಮಾಜಿ ಅಧ್ಯಕ್ಷರಾದ ಎಂ. ವಿ. ಹೊರಕೇರಿ, ಸಂಘದ ನಿರ್ದೇಶಕ ಡಿ.ಟಿ. ಮಂಜಪ್ಪ, ಬಿ. ಎಚ್. ಶಿವಕುಮಾರ್, ಬಿ.ಎಸ್. ಜಗದೀಶ್, ಮುಸ್ತಾಕ್ ಅಹಮದ್, ರೂಪ ಕಾಮತ್, ವಿ.ಬಿ. ಕೊಟ್ರೇಶಪ್ಪ, ಈರಮ್ಮ ಎಲಿಗಾರ್ , ನಿಂಗಪ್ಪ , ಆದರ್ಶ್, ಎಸ್ ಮಂಜುನಾಥ್, ಮತ್ತು ಇತರೆ ಪದಾಧಿಕಾರಿಗಳು, ನಿರ್ದೇಶಕರು ಹಾಗೂ ವಿವಿಧ ವೃಂದ ಸಂಘಗಳ ಪದಾಧಿಕಾರಿಗಳು ಹಾಗೂ ನೌಕರರು ಹಾಜರಿದ್ದರು.