ರಾಜ್ಯಮಟ್ಟದ ಮಹಿಳಾ ಫುಟ್ಬಾಲ್ ಲೀಗ್ ಪಂದ್ಯಾವಳಿಗೆ ಎಸ್ಸೆಸ್ ಚಾಲನೆ

ರಾಜ್ಯಮಟ್ಟದ ಮಹಿಳಾ ಫುಟ್ಬಾಲ್ ಲೀಗ್ ಪಂದ್ಯಾವಳಿಗೆ ಎಸ್ಸೆಸ್ ಚಾಲನೆ

ದಾವಣಗೆರೆ,ಜ.13- ಕ್ರೀಡಾಕೂಟಗಳಲ್ಲಿ ಮಕ್ಕಳು ಹೆಚ್ಚೆಚ್ಚು ಭಾಗವಹಿಸಬೇಕು.ಇದರಿಂದ ಮಕ್ಕಳ ಆರೋಗ್ಯ ಸದೃಢವಾಗ ಲಿದೆ ಎಂದು ಶಾಸಕರೂ, ಬಾಪೂಜಿ ವಿದ್ಯಾಸಂಸ್ಥೆ ಗೌರವ ಕಾರ್ಯ ದರ್ಶಿಯೂ ಆದ ಶಾಮನೂರು ಶಿವಶಂಕರಪ್ಪ ತಿಳಿಸಿದರು.

ಜಿಲ್ಲಾ ಫುಟ್‍ಬಾಲ್ ಅಸೋಸಿಯೇಷನ್ ವತಿಯಿಂದ ನಗರದ ಲೂರ್ಡ್ಸ್‌ ಬಾಯ್ಸ್ ಸ್ಕೂಲ್ ಆವರಣದಲ್ಲಿ ಹಮ್ಮಿಕೊಂಡಿರುವ ರಾಜ್ಯಮಟ್ಟದ ಹೊನಲು ಬೆಳಕಿನ ಮಹಿಳಾ ಪುಟ್ಬಾಲ್ ಲೀಗ್ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಇಂದಿನ ದಿನಗಳಲ್ಲಿ ಮಕ್ಕಳು ಮೊಬೈಲ್ ಗೀಳಿನಿಂದಾಗಿ ಕ್ರೀಡಾಕೂಟಗಳಲ್ಲಿ ಭಾಗವಹಿಸುವುದೇ ಕಡಿಮೆ. ಇದು ಮುಂದುವರೆಯಬಾರದು. ಮಕ್ಕಳು ಹೆಚ್ಚೆಚ್ಚು ಕ್ರೀಡಾಕೂಟ ಗಳಲ್ಲಿ ಭಾಗವಹಿಸುವ ಮೂಲಕ ಆರೋಗ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಪುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷರಾದ ದಿನೇಶ್ ಕೆ. ಶೆಟ್ಟಿ, ಜಿಲ್ಲಾ ಪುಟ್ಬಾಲ್ ಅಸೋಸಿಯೇಷನ್‍ನ ಪ್ರಧಾನ ಕಾರ್ಯದರ್ಶಿ ಅಲ್ಲಾವಲ್ಲಿ ಮುಜಾಹಿದ್ ಖಾನ್, ಮಹಮದ್ ರಫೀಕ್, ಮಹಾನಗರ ಪಾಲಿಕೆ ಸದಸ್ಯರುಗಳಾದ ಎ.ನಾಗರಾಜ್, ಕೆ. ಚಮನ್‍ಸಾಬ್, ಜಿ.ಎಸ್.ಮಂಜುನಾಥ್, ಜಾಕೀರ್ ಅಲಿ, ಶಫೀಕ್ ಪಂಡಿತ್, ಹರಿಹರ ರೇವಣಸಿದ್ದಪ್ಪ, ಫುಟ್ ಬಾಲ್ ಗಿರೀಶ್, ಕೋಚ್ ಮುಸ್ತಾಫ ಮತ್ತಿತರರಿದ್ದರು.

error: Content is protected !!