ದಾವಣಗೆರೆ, ಜ. 13- 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿಯವರು ಭರವಸೆ ನೀಡಿದಂತೆ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಬಿಸಿಯೂಟ ತಯಾರಕರಿಗೆ ಈಗ ಇರುವ ವೇತನ 3600 ಗಳಿಗೆ ಬದಲಾಗಿ ಆರು ಸಾವಿರ ವೇತನ ನೀಡಲಾಗುವುದು ಎಂದು ಹೇಳಿದ್ದರು.
6ನೇ ಗ್ಯಾರಂಟಿ ಜಾರಿ ತರುವುದು ಸೇರಿದಂತೆ ಬಿಸಿಯೂಟ ತಯಾರಕರಿಗೆ ನಿವೃತ್ತಿಯಾದಾಗ ಎರಡು ಲಕ್ಷ ರೂ. ಇಡುಗಂಟು ಹಣ ಮತ್ತು ಮರಣ ಪರಿಹಾರ 10 ಲಕ್ಷ ರೂ., ಕೆಲಸದ ಭದ್ರತೆ ಮತ್ತಿತರೆ ಬೇಡಿಕೆಗಳನ್ನು ಈಡೇರಿಸಬೇಕೆಂದು ಶುಕ್ರವಾರ ಶಾಸಕ ಶಾಮನೂರು ಶಿವಶಂಕರಪ್ಪನವರ ನಿವಾಸಕ್ಕೆ ತೆರಳಿ ಬಿಸಿಯೂಟ ತಯಾರಕರು ಮನವಿ ಸಲ್ಲಿಸಿ, ಬರುವ ವಿಧಾನಸಭೆ ಬಜೆಟ್ ಅಧಿವೇಶನದಲ್ಲಿ ತಾವುಗಳು ಸರ್ಕಾರಕ್ಕೆ ಒತ್ತಾಯಿಸಿ ಬಿಸಿಯೂಟ ತಯಾರಕರ ಪರವಾಗಿ ಧ್ವನಿ ಎತ್ತುವಂತೆ ಒತ್ತಾಯಿಸಿದರು. ಮನವಿ ಸ್ವೀಕರಿ ಸಿದ ಶಾಸಕರು ಸಕಾರಾತ್ಮಕವಾಗಿ ಸ್ಪಂದಿಸಿದರು.
ಶಾಸಕರ ನಿವಾಸಕ್ಕೆ ತೆರಳಿದ ನಿಯೋಗದಲ್ಲಿ ಬಿಸಿಯೂಟ ತಯಾರಕರ ಫೆಡರೇಶನ್ ನ ರಾಜ್ಯ ಪ್ರಧಾನ ಕಾರ್ಯದರ್ಶಿ ಆವರಗೆರೆ ಚಂದ್ರು ಮತ್ತು ಜಿಲ್ಲಾ ಮುಖಂಡರುಗಳಾದ ಸಿ ರಮೇಶ್, ಜ್ಯೋತಿ ಲಕ್ಷ್ಮಿ, ಸರೋಜ, ಮಳಲ್ಕೆರೆ ಜಯಮ್ಮ, ಪದ್ಮ, ವನ ಜಾಕ್ಷಮ್ಮ, ರುದ್ರಮ್ಮ ಮೀನಾಕ್ಷಮ್ಮ, ಅನುಸೂ ಯಮ್ಮ, ಮಾಧವಿ, ಸುವರ್ಣಮ್ಮ, ನೀಲಮ್ಮ, ಮಾಣಿಕ್ಯಮ್ಮ ಸೇರಿದಂತೆ ಐವತ್ತಕ್ಕೂ ಹೆಚ್ಚು ಬಿಸಿಯೂಟ ತಯಾರಕ ಮಹಿಳೆಯರು ಇದ್ದರು.