ನಗರದಲ್ಲಿ `ನಮ್ಮ ಕಾರ್ಗೋ’ ಟ್ರಕ್ ಸಾರಿಗೆ ಸೇವೆಗೆ ಚಾಲನೆ

ನಗರದಲ್ಲಿ `ನಮ್ಮ ಕಾರ್ಗೋ’ ಟ್ರಕ್ ಸಾರಿಗೆ ಸೇವೆಗೆ ಚಾಲನೆ

ದಾವಣಗೆರೆ, ಜ.11-  ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕೆಎಸ್ಆರ್ಟಿಸಿ `ನಮ್ಮ ಕಾರ್ಗೋ’ ಟ್ರಕ್ ಸಾರಿಗೆ ಸೇವೆಯನ್ನು    ಪಿ.ಬಿ. ರಸ್ತೆಯಲ್ಲಿರುವ  ಎಸ್. ಕೆ.  ವೀರಭದ್ರಪ್ಪ ಅಂಡ್  ಕೋ ಅಂಗಡಿಯಿಂದ ಶಿವಮೊಗ್ಗದ ನಂದಿ ಎಂಟರ್‌ಪ್ರೈಸಸ್ ಗೆ  ಚಾಲನೆ ನೀಡಲಾಯಿತು.

 ಈ ಸಂದರ್ಭದಲ್ಲಿ ಅಂಗಡಿಯ ಮಾಲೀಕ ಗಿರೀಶ್,  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ದಾವಣಗೆರೆ ವಿಭಾಗದ ವಿಭಾಗೀಯ ನಿಯಂತ್ರಣ ಅಧಿಕಾರಿ    ಶ್ರೀನಿವಾಸ ಮೂರ್ತಿ    ಮತ್ತು ವಿಭಾಗಿಯ ತಾಂತ್ರಿಕ ಅಭಿಯಂತರ  ವೆಂಕಟೇಶ್   ಮತ್ತು ವಿಭಾಗಿಯ ಸಂಚಾಲನಾಧಿಕಾರಿ   ಫಕೃದ್ದೀನ್,   ಘಟಕ ವ್ಯವಸ್ಥಾಪಕ  ಶ್ರೀರಾಮಚಂದ್ರಪ್ಪ  `ನಮ್ಮ ಕಾರ್ಗೋ’ ವಾಹನವನ್ನು ಕಳುಹಿಸಿಕೊಟ್ಟರು. ಅಂಗಡಿಯ ಮಾಲೀಕರು ವಾಹನದ ವೈಶಿಷ್ಟ್ಯಗಳ ಬಗ್ಗೆ ಸಂತಸ ಹಂಚಿಕೊಂಡರು.

ಕಾರ್ಗೋ ಸೇವೆಗೆ ಸಹಕರಿಸಿದ ಬಾಬಣ್ಣ, ಕಾರು ಚಾಲಕ ರವಿ ಮತ್ತು ಕೆಎಂ ವೀರಯ್ಯ ಅವರು ಇದ್ದರು, ಇದೇ ಸಂದರ್ಭದಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ನಮ್ಮ ಕಾರ್ಗೋ ಸೇವೆಗೆ ಒತ್ತು ಕೊಡಿ ಎಂದು ಮನವಿ ಮಾಡಿದರು.

error: Content is protected !!