ಹರಿಹರ : ಇಂದು ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿ

ಹರಿಹರ : ಇಂದು ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿ

ಹರಿಹರ, ಜ,11-ನಗರದಲ್ಲಿ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಶ್ರೀ ಕಾಮಧೇನು ಫ್ರೆಂಡ್ಸ್ ಗ್ರೂಪ್ ಹಾಗೂ ಡಿ.ಆರ್.ಎಂ. ಫೈಟರ್ಸ್ ಹರಿಹರ ಇವರ ಸಂಯುಕ್ತಾಶ್ರಯದಲ್ಲಿ ಮೊದಲ ಬಾರಿಗೆ ಶ್ರೀ ಹರಿಹರೇಶ್ವರ ಟ್ರೋಫಿ ರಾಷ್ಟ್ರಮಟ್ಟದ ಹೊನಲು ಬೆಳಕಿನ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟನ್ನು ನಾಳೆ ದಿನಾಂಕ 12, 13 ಮತ್ತು 14 ರಂದು ಡಿ.ಆರ್.ಎಂ. ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಶ್ರೀ ಕಾಮಧೇನು ಫ್ರೆಂಡ್ಸ್ ಗ್ರೂಪ್ ಅಧ್ಯಕ್ಷ ರಮೇಶ್ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. 

ಟೂರ್ನಮೆಂಟ್ ನಲ್ಲಿ ಎಂ.ಪಿ. ಚೆನೈ ರಾಜ್ಯದ ಎರಡು ತಂಡಗಳು ಸೇರಿದಂತೆ ರಾಜ್ಯದ  ಲೀಗ್ ಕಂ ನಾಕೌಟ್ ಮಾದರಿಯ 16 ತಂಡಗಳು ಭಾಗವಹಿಸಲಿದ್ದು, ಗೆದ್ದಂತಹ ತಂಡಗಳಿಗೆ ಮೂರು ಲಕ್ಷ ಒಂದನೂರಾ ಒಂದು ರೂಪಾಯಿ ಪ್ರಥಮ ಬಹುಮಾನ ಮತ್ತು ಹರಿಹರೇಶ್ವರ ಪಾರಿತೋಷಕ, ಒಂದು ಲಕ್ಷದ ಐವತ್ತು ಸಾವಿರದ ಐದನೂರ ಐವತ್ತೈದು ರೂಪಾಯಿ ದ್ವಿತೀಯ ಬಹುಮಾನ ಹರಿಹರೇಶ್ವರ ಪಾರಿತೋಷಕ, 50  ಸಾವಿರದ ಐದನೂರ ಐವತ್ತೈದು ರೂಪಾಯಿ ತೃತೀಯ ಬಹುಮಾನ ಜೊತೆಗೆ ಹರಿಹರೇಶ್ವರ ಪಾರಿತೋಷಕ ಪ್ರಶಸ್ತಿ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಅನಾಥ ಮಕ್ಕಳ ಸಹಾಯಾರ್ಥಕ್ಕಾಗಿ ದಿನಾಂಕ 14 ರಂದು, 100 ರೂಪಾಯಿ ಟಿಕೆಟ್ ದರದಲ್ಲಿ ಲಕ್ಕಿ ಡ್ರಾ ಮಾಡುತ್ತಿದ್ದು, ಆ ಹಣವನ್ನು ಅನಾಥ ಮಕ್ಕಳ ಮತ್ತು ಬುದ್ದಿ ಮಾಂಧ್ಯ ಮಕ್ಕಳಿಗೆ ವಿತರಣೆ ಮಾಡಲಾಗುತ್ತದೆ. 

ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕ ಬಿ.ಪಿ. ಹರೀಶ್, ಬಿಜೆಪಿ ಮುಖಂಡರಾದ ಚಂದ್ರಶೇಖರ್ ಪೂಜಾರ್, ಡಾ. ರವಿಕುಮಾರ್, ಕೆ.ಬಿ. ಕೊಟ್ರೇಶ್, ಕಾಂಗ್ರೆಸ್ ಮುಖಂಡ ಜಿ.ಬಿ. ವಿನಯಕುಮಾರ್ ಕಕ್ಕರಗೊಳ್ಳ, ತಪೋವನ ಛೇರ್ಮನ್ ಡಾ. ಶಶಿಕುಮಾರ್ ಮಹೆರ್ವಾಡೆ ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿ ಚಾಲನೆ ನೀಡಲಿದ್ದಾರೆ. 

ಈ ಸಂದರ್ಭದಲ್ಲಿ ಡಿ.ಆರ್.ಎಂ. ಫೈಟರ್ಸ್ ಅಧ್ಯಕ್ಷ ಗಿರೀಶ್, ಸಿದ್ದಾರ್ಥ, ಸಾಗರ್, ನಾಗರಾಜ್, ಮಂಜುನಾಥ್, ಮೆಹಬೂಬ್, ಪ್ರೀತಂ ಬಾಬು ಇತರರು ಹಾಜರಿದ್ದರು.

error: Content is protected !!