ಜಿ.ಎಸ್. ಶಿಲ್ಪ ರಾಷ್ಟ್ರ ಮಟ್ಟದ ಕಲೋತ್ಸವಕ್ಕೆ ಆಯ್ಕೆ

ಜಿ.ಎಸ್. ಶಿಲ್ಪ ರಾಷ್ಟ್ರ ಮಟ್ಟದ ಕಲೋತ್ಸವಕ್ಕೆ ಆಯ್ಕೆ

ದಾವಣಗೆರೆ, ಜ. 11 – ನಗರದ ಶ್ರೀ ಜಗದ್ಗುರು ಜಯವಿಭವ ವಿದ್ಯಾ ಸಂಸ್ಥೆಯ ಶ್ರೀ ಜಗದ್ಗುರು ಜಯದೇವ ಮುರುಘ ರಾಜೇಂದ್ರ ಪ್ರೌಢಶಾಲೆಯ ವಿದ್ಯಾರ್ಥಿನಿ ಶಿಲ್ಪಾ ಜಿ.ಎಸ್. ಕಲಾ ವಿಭಾಗದ ಸ್ಥಳೀಯ ಆಟಿಕೆಗಳು ಮತ್ತು ಆಟಗಳು ಇದರಲ್ಲಿ ತೆಂಗಿನ ಚಿಪ್ಪು ಬಳಸಿ ಅವಿಭಕ್ತ ಕುಟುಂಬದ ಮಾದರಿಯ ಗೊಂಬೆಗಳನ್ನು ತಯಾರಿಸಲಾದ ಮಾದರಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟದ ಕಲೋತ್ಸವಕ್ಕೆ ಆಯ್ಕೆ ಆಗಿದೆ. 

ಅದೇ ರೀತಿ ಜಿಲ್ಲಾಮಟ್ಟದ ಕೋಲೋತ್ಸವದಲ್ಲಿ ಪ್ರಜ್ವಲ್ ನಾಯ್ಕ ದೃಶ್ಯಕಲೆ 2ಡಿ ಪ್ರಥಮ ಸ್ಥಾನ, ರಕ್ಷಿತ ಕಣವಿ ದೃಶ್ಯಕಲೆ 3ಡಿ ಕ್ಲೇಮಾಡಲ್ ಪ್ರಥಮ ಸ್ಥಾನ, ಎಸ್. ನಿರಂಜನ ದ್ವಿತೀಯ ಸ್ಥಾನ, ಜಾನಪದ ಗೀತೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.  ಸುಮಾರು 7 ಬಾರಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದದ್ದು, ಈ ಬಾರಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟದಲ್ಲಿ ಭಾಗವಹಿಸುತ್ತಿರುವುದು ನಮ್ಮ ಸಂಸ್ಥೆಯ ಆಡಳಿತ ಮಂಡಳಿ, ಶಿಕ್ಷಣ ಇಲಾಖೆ ಹಾಗೂ ಮುಖ್ಯೋಪಾಧ್ಯಾಯರು ಮತ್ತು ಎಲ್ಲ ಶಿಕ್ಷಕರ ಸಹಕಾರ ಕಾರಣ ಎಂದು ಚಿತ್ರಕಲಾ ಶಿಕ್ಷಕರು, ಮಾರ್ಗದರ್ಶಕರೂ ಆದ ಶಾಂತಯ್ಯ ಪರಡಿಮಠ ಹರ್ಷ ವ್ಯಕ್ತಪಡಿಸಿದ್ದಾರೆ. ಸಂಸ್ಥೆಯ ಕಾರ್ಯದರ್ಶಿ ಮನೋಹರ ಚಿಗಟೇರಿ ಅವರು ವಿಜೇತ ಮಕ್ಕ್ಕಳಿಗೆ ಅಭಿನಂದಿಸಿದ್ದಾರೆ. 

ಶಾಲೆಯ ಮುಖ್ಯೋಪಾಧ್ಯಾಯ ಎಸ್. ನಾಗರಾಜ್, ಸಹ ಶಿಕ್ಷಕಿ ಹೆಚ್.ಬಿ. ಜ್ಯೋತಿ, ಜಿ.ಎಮ್. ಪ್ರಭುದೇವ, ಕೆ. ಹಾಲಪ್ಪ, ಲಿಂಗರಾಜ ಗಾಜಿ, ಹೆಚ್. ಶ್ವೇತ, ಭಾಗ್ಯಲಕ್ಷ್ಮಿ, ರುಖಯ್ಯ ಬಾನು, ಸಂತೋಷ ಉಪಸ್ಥಿತರಿದ್ದರು. 

error: Content is protected !!