ದಾವಣಗೆರೆ, ಜ.11- ಜಿಲ್ಲಾ ಪೊಲೀಸ್ ವತಿಯಿಂದ ನಗರದ ಆಟೋ ಚಾಲಕರು ಹಾಗೂ ಮಾಲೀಕರುಗಳಿಗೆ ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎಸ್ಪಿ ಉಮಾ ಪ್ರಶಾಂತ್, ಆಟೋ ಚಾಲಕರು ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸಬೇಕು. ಆಟೋ ಚಾಲಕರ ಹಾಗೂ ಮಾಲೀಕರ ಸಮಸ್ಯೆಗಳನ್ನು ನಮ್ಮ ಪೊಲೀಸ್ ಪರಿಮಿತಿಯಲ್ಲಿ ಆಗುವಂತಹ ಎಲ್ಲಾ ಪರಿಹಾರಗಳನ್ನು ಒದಗಿಸ ಲಾಗುವುದು ಎಂದು ಹೇಳಿ ದರು. ಇತ್ತೀಚಿಗೆ ಹಲ ವಾರು ಆಟೋ ಚಾಲಕರು ಪ್ರಯಾಣಿಕರು ಆಟೋ ದಲ್ಲಿ ಪ್ರಯಾಣಿಸು ವಾಗ ಬಿಟ್ಟು ಹೋದಂತಹ ವಸ್ತು ಗಳನ್ನು ಮರಳಿಸಿ ಪ್ರಾಮಾ ಣಿಕತೆ ಮೆರೆದಿ ದ್ದಾರೆ ಅವರುಗಳಿಗೆ ಅಭಿನಂದಿ ಸುವುದಾಗಿ ಹೇಳಿದು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ವಿಜಯಕುಮಾರ್ ಸಂತೋಷ್, ಮಂಜುನಾಥ ಜಿ, ಡಿವೈಎಸ್ಪಿಗಳಾದ ಬಸವರಾಜ್ ಬಿ.ಎಸ್, ಪ್ರಕಾಶ್ ಪಿ.ಬಿ, ಸಂಚಾರ ಪೊಲೀಸ್ ವೃತ್ತ ನಿರೀಕ್ಷಕ ಮಂಜುನಾಥ ನಲವಾಗಲು, ಆಟೋ ಚಾಲಕರ ಸಂಘದ ಅಧ್ಯಕ್ಷರುಗಳಾದ ಅಣ್ಣಪ್ಪಸ್ವಾಮಿ, ಕೊಟ್ರೇಶಪ್ಪ, ಮಂಜುನಾಥ, ಮಾರುತಿ ಇತರರು ಈ ಸಂದರ್ಭದಲ್ಲಿದ್ದರು.