ದಕ್ಕಲಿಗ ಹೆಣ್ಣುಮಕ್ಕಳಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಾಗಾರ

ದಕ್ಕಲಿಗ ಹೆಣ್ಣುಮಕ್ಕಳಿಗೆ  ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಾಗಾರ

ದಾವಣಗೆರೆ, ಜ.11- ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜ್ ಹಾಗು ಖಾದಿ ಗ್ರಾಮೋದ್ಯೋಗ ಆಯೋಗ ಇವರ ಸಹಯೋಗದಲ್ಲಿ  ನಗರದ ವನಿತಾ ಸಮಾಜದ ಆವರಣದಲ್ಲಿ ಚಿಕ್ಕಮೇಗಳಗೆರೆಯ ದಕ್ಕಲಿಗ ಹೆಣ್ಣುಮಕ್ಕಳಿಗಾಗಿ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಾಗಾರ ಹಮ್ಮಿಕೊ ಳ್ಳಲಾಗಿತ್ತು. 

 ನಿವೃತ್ತ   ಪೊಲೀಸ್ ವರಿಷ್ಠಾಧಿಕಾರಿ  ರವಿನಾರಾಯಣ್,  ವನಿತಾ ಸಮಾಜದ ಪ್ರೇರಣಾ ಸಂಸ್ಥೆಯ ಕಾರ್ಯದರ್ಶಿ  ಸುಚಿತ್ರಾ ಮಾಗಾನಳ್ಳಿ  ರಾಜ್ಯ  ಪ್ರಜಾಸತ್ತಾತ್ಮಕ ಹಕ್ಕುಗಳು ಮತ್ತು ಜಾತ್ಯತೀತತೆಯ ರಕ್ಷಣಾ  ಸಮಿತಿ  ಸದಸ್ಯ  ಸುಬ್ಬರಾಜು.ಟಿ.ವಿ. ಇವರುಗಳು ಆಗಮಿಸಿದ್ದರು.  ಮೂವರೂ ಅತಿಥಿಗಳು  ದಕ್ಕಲಿಗ ಹೆಣ್ಮಕ್ಕಳ ಸ್ಥಿತಿಗತಿಗಳನ್ನು  ತಿಳಿದು ತರಬೇತಿಯ ನಂತರದ ಬೆಳವಣಿಗೆಗೆ ತಮ್ಮ ಕೈಲಾದ ಸಹಾಯ ಮಾಡುವುದಾಗಿ ಭರವಸೆ ನೀಡಿದರು. 

ಈ ಕಾರ್ಯಾಗಾರದ ಆಯೋಜಕರಾದ ಬಿ.ಟಿ. ಜಾಹ್ನವಿ ಮತ್ತು ಚಮನ್ ಫರ್ಜಾನ ಅವರು ಕಾರ್ಯಕ್ರಮದ ನಿರ್ವಹಣೆ ಮಾಡಿದರು. ಕಡೆಯಲ್ಲಿ ಫಲಾನುಭವಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು.

error: Content is protected !!