ಮಲೇಬೆನ್ನೂರು, ಜ. 11- ದೇವರಬೆಳಕೆರೆ ಸಮೀಪದ ಕಡ್ಲೆಗೊಂದಿ ಗ್ರಾಮದಲ್ಲಿ ಮಹೇಶ್ವರ ಸ್ವಾಮಿಯ ಹಬ್ಬದ ಅಂಗವಾಗಿ ಮಹೇಶ್ವರ ದೇವರ ಉತ್ಸವವು ಬುಧವಾರ ಸಂಜೆ ಸಂಭ್ರಮದಿಂದ ಜರುಗಿತು. ವೀರಗಾಸೆ ಸೇರಿದಂತೆ ವಿವಿಧ ಕಲಾ-ಮೇಳಗಳು ಉತ್ಸವಕ್ಕೆ ಮೆರಗು ತಂದವು. ದೇವರನ್ನು ಹೊತ್ತ ಪಲ್ಲಕ್ಕಿಗೆ ಹೊಸ ನೋಟುಗಳಿಂದ ಮಾಡಲಾಗಿದ್ದ ಅಲಂಕಾರ ಭಕ್ತರ ಗಮನ ಸೆಳೆಯಿತು.
ಕಡ್ಲೆಗೊಂದಿಯಲ್ಲಿ ಮಹೇಶ್ವರ ಉತ್ಸವ
