ದಾವಣಗೆರೆ, ಜ. 10- ಸಾವಿತ್ರಿ ಬಾಯಿ ಫುಲೆ ರವರ 193 ನೇ ಜಯಂತಿ ಅಂಗವಾಗಿ ದಲಿತ ವಿದ್ಯಾರ್ಥಿ ಪರಿಷತ್ತು ವತಿಯಿಂದ ಕೊಡ ಮಾಡುವ ರಾಜ್ಯಮ ಟ್ಟದ ಸಾವಿತ್ರಿಬಾಯಿ ಫುಲೆ ಪ್ರಶಸ್ತಿಯನ್ನು ದಾವಣಗೆರೆ ಜಿಲ್ಲೆಯ ಯುವ ಸಾಮಾಜಿಕ ಹೋರಾಟಗಾರ್ತಿಯೂ ಆಗಿರುವ ಜಗಳೂರು ತಾಲ್ಲೂಕಿನ ಜಾಡನಕಟ್ಟೆ ಸರ್ಕಾರಿ ಶಾಲೆಯ ಶಿಕ್ಷಕಿ ಕೆ.ಬಿ. ಜ್ಯೋತಿ ಮತ್ತು ಮಹಿಳೆಯರ, ಮಕ್ಕಳ ಹಕ್ಕುಗಳನ್ನು ರಕ್ಷಿಸುವಲ್ಲಿ, ನ್ಯಾಯ ದೊರಕಿಸಿ ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಜಬೀನಾ ಖಾನಂ ಅವರಿಗೆ ಪ್ರಶಸ್ತಿ ಲಭಿಸಿದೆ.
ನಗರದ ಕು. ಜಬೀನಾ ಖಾನಂ ಅವರು ಸುಮಾರು ವರ್ಷಗಳಿಂದ ಮಹಿಳಾ ಪರ ಹೋರಾಟಗಳಲ್ಲಿ, ದಲಿತ ಪರ ಹೋರಾಟಗಳಲ್ಲಿ ಭಾಗವಹಿಸಿ ಮಹಿಳೆಯರ ಮತ್ತು ಮಕ್ಕಳ ಹಕ್ಕುಗಳನ್ನು ರಕ್ಷಿಸುವಲ್ಲಿ, ನ್ಯಾಯ ದೊ ರಕಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಮಹಿಳೆಯರಿಗಾಗಿ ಪ್ರತ್ಯೇಕ ಸೊಸೈಟಿ ನಿರ್ಮಿಸಿ, ಆರ್ಥಿಕ ಚಟುವ ಟಿಕೆಗಳಲ್ಲಿ ಮಹಿಳೆಯರು ತೊಡಗಿಸಿ ಕೊಳ್ಳುವಂತೆ ಪ್ರೇರಣೆ ನೀಡುತ್ತಿದ್ದಾರೆ.
ಅದೇ ರೀತಿಯಾಗಿ ಜಗಳೂರಿನ ಜಾಡನಕಟ್ಟೆಯಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಕೆ.ಬಿ. ಜ್ಯೋತಿ ಅವರು ಹಳ್ಳಿ ಗಾಡು ಪ್ರದೇಶದಲ್ಲಿ ನಡೆದುಕೊಂಡು ಹೋಗಿ ಪಾಠ ಮಾಡುವವರು. ಅತೀ ಹಿಂದುಳಿದ ಈ ಒಂದು ಶಾಲೆ ಯಲ್ಲಿ ಯಾವುದೇ ಸಹಕಾರ ವಿಲ್ಲದಿ ದ್ದರೂ, ಹಳ್ಳಿಯ ಜನರ ಭಾಗವಹಿಸು ವಿಕೆ ಇಲ್ಲದಿದ್ದರೂ, ಹೇಗಾದರೂ ಮಾಡಿ ಅತ್ಯಂತ ಹಿಂದುಳಿದ ಶಾಲೆ ಯನ್ನು ಮಾದರಿ ಶಾಲೆಯನ್ನಾಗಿ ರೂಪಿ ಸುವಲ್ಲಿ ಯಶಸ್ವಿಯಾಗಿದ್ದಾರೆ. ಮಕ್ಕಳಿಗೆ ಕೇವಲ ಶೈಕ್ಷಣಿಕ ಚಟುವಟಿಕೆಗಳಿಗೆ ಸೀಮಿತ ಮಾಡದೆ, ಸಾಮಾಜಿಕ ಮತ್ತು ಆರ್ಥಿಕವಾಗಿ ಬಲ ತುಂಬುತ್ತಿದ್ದಾರೆ. ಕೆಲವು ಜನಪರ ಸಂಘಟನೆಗಳ, ಸರ್ಕಾರೇತರ ಸಂಸ್ಥೆಗಳ ಸಹಾಯದಿಂದ ಸಮುದಾಯ ಸಂಘಟನೆಗಳ ಮೂಲಕ ಮಾದರಿ ಶಾಲೆಗೆ ಬೇಕಾದಂತಹ ಎಲ್ಲಾ ರೀತಿಯ ಅವಕಾಶ ಸೃಷ್ಟಿಸಿ, ಅವುಗಳನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಜಾಗೃತಿ ಮೂಡಿಸುವುದು ಹಾಗೂ ಮಾಸ್ಕ್‌ಗಳನ್ನು ಹಂಚುವುದು ಸೇರಿದಂತೆ ಇತರೆ ಸಾಮಾಜಿಕ ಸೇವೆಗಳನ್ನು ಮಾಡಿದ್ದಾರೆ. ವಿಶೇಷ ಚೇತನರಿಗೆ ಪರೀಕ್ಷೆಗಳನ್ನು ಬರೆಯಲು ನೆರವಾಗುವುದು ಅಷ್ಟೇ ಅಲ್ಲದೆ, ಜನ ಮೆಚ್ಚಿದ ಶಿಕ್ಷಕಿ ಪ್ರಶಸ್ತಿ, ಉತ್ತಮ ನಲಿ-ಕಲಿ ಶಿಕ್ಷಕಿ ಪ್ರಶಸ್ತಿ, ಶಿರೋಸ್ ಪ್ರಶಸ್ತಿ ಸೇರಿದಂತೆ ಇನ್ನು ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ಜಿಲ್ಲೆಯಿಂದ ಆಯ್ಕೆಯಾದ ಪ್ರಶಸ್ತಿ ಪುರಸ್ಕೃತರಿಗೆ ದಲಿತ ವಿದ್ಯಾರ್ಥಿ ಪರಿಷತ್ತು ಜಿಲ್ಲಾಧ್ಯಕ್ಷರೂ, ಮಲೇ ಬೆನ್ನೂರು ಪುರಸಭೆ ಸದಸ್ಯರೂ ಆದ ಸಾಬೀರ್ ಅಲಿ, ಕಾರ್ಯದರ್ಶಿ ಆನಂದ್ ನಾಯ್ಕ್ ಅಭಿನಂದಿಸಿದ್ದಾರೆ.